Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ-ಬೀದರ್ ಜಿಲ್ಲೆಯಲ್ಲಿ 44.5 ಗರಿಷ್ಠ ತಾಪಮಾನ

ಕಲಬುರಗಿ-ಬೀದರ್ ಜಿಲ್ಲೆಯಲ್ಲಿ 44.5 ಗರಿಷ್ಠ ತಾಪಮಾನ

0

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಅಧಿಕವಾಗುತ್ತಿದ್ದು, ಸೋಮವಾರ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಹೋಬಳಿಯಾಗಿರುವ ನಿಂಬರ್ಗಾ ತಾಂಡಾ ಮತ್ತು ಬೀದರ್ ಜಿಲ್ಲೆಯ ದಬಕ ಹೋಬಳಿಯಲ್ಲಿ ಅತಿ ಹೆಚ್ಚು 44.5ರಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾದಗಿರಿ-43.5, ರಾಯಚೂರು-42.6, ಬಳ್ಳಾರಿ-40.5, ಕೊಪ್ಪಳ ಜಿಲ್ಲೆಯಲ್ಲಿ 39.7 ತಾಪಮಾನ ದಾಖಲಾಗಿದ್ದು, ವಿಜಯಪುರದಲ್ಲೂ 42.1 ತಾಪಮಾನ ಇದೆ ಎಂದು ಹವಾಮಾನ ಇಲಾಖೆಯಿಂದ ತಿಳಿದು ಬಂದಿದೆ.

Exit mobile version