Home ಅಪರಾಧ ಕಲಬುರಗಿ ಪಿಡಬ್ಲುಡಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಲೋಕಾ ಬಲೆಗೆ

ಕಲಬುರಗಿ ಪಿಡಬ್ಲುಡಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಲೋಕಾ ಬಲೆಗೆ

0

ಸಂ.ಕ.‌ಸಮಾಚಾರ ಕಲಬುರಗಿ: ಲೋಕಾಯುಕ್ತ ಎಸ್‌.ಪಿ – ಬಿಕೆ. ಉಮೇಶ್ ನೇತೃತ್ವದಲ್ಲಿ ಬಳ್ಳಾರಿ ಪಿಡಬ್ಲ್ಯೂಡಿ ವೃತ್ತ ದ ಸೂಪರಡೆಂಟ್ ಇಂಜಿನಿಯರ್ ಅಮೀನಾ ಮುಖ್ತಾರ ಅವರ ಕಲಬುರಗಿ ಹಾಗೂ ಬಳ್ಳಾರಿಯಲ್ಲಿರುವ ಮನೆ ಮೇಲೆ ಲೋಕಾ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳಗ್ಗೆಯಿಂದಲೇ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದ ಮೇಲೆ ದಾಳಿ ನಡೆದಿದೆ.
ಕಲಬುರಗಿ ನಗರದ ಮೂರನೇ ಕ್ರಾಸ್ ನಿಯರ್ ಹುಸೇನಿ ಗಾರ್ಡನ ನಲ್ಲಿರುವ ಮನೆ , ಬಳ್ಳಾರಿ ಮನೆ, ಕಲಬುರಗಿ ನಗರದ ಅಪಾರ್ಟ್ಮೆಂಟ್ ಏಷಿಯನ್ ಲೈಫ್ ಸ್ಟೈಲ್ ಮನೆ ಮತ್ತು ಕಚೇರಿಯಲ್ಲಿ ಶೋಧ ಮುಂದುವರಿಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಉಮೇಶ್, ಬಳ್ಳಾರಿ ಲೋಕಾಯುಕ್ತ ಎಸ್ ಪಿ . ತಂಡ , ಡಿವೈಎಸ್ಪಿ. -ಗೀತಾ ಬೆನಾಳ, ಅರುಣ್ ಕುಮಾರ್ ಇನ್ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿಗಳು ಇದ್ದರು.

Exit mobile version