ಬೆಂಗಳೂರು: ನೆರೆಯ ಗೋವಾದಲ್ಲಿ ೧೦೦ ರೂಪಾಯಿಗೆ ದೊರೆಯುವ ಮದ್ಯದ ಬೆಲೆ ಅತಿಯಾದ ಅಬಕಾರಿ ಸುಂಕದ ಪರಿಣಾಮ ಕರ್ನಾಟಕದಲ್ಲಿ ೩೦೫ ರೂಪಾಯಿ ಇರಲಿದೆ..!
ಗೋವಾದಲ್ಲಿ ೧೦೦ ರೂಪಾಯಿ ಇರುವ ಮದ್ಯದ ಬೆಲೆ ನೆರೆಯ ತೆಲಂಗಾಣದಲ್ಲಿ ೨೨೯, ರಾಜಸ್ತಾನದಲ್ಲಿ ೨೦೫ ರೂಪಾಯಿ ಇದ್ದರೆ ಕರ್ನಾಟಕದಲ್ಲಿ ಮಾತ್ರ ಅದರ ಬೆಲೆ ೩೦೫ ರೂಪಾಯಿ..!
ಆಶ್ಚರ್ಯವೆನಿಸಿದರೂ ಇದು ಸತ್ಯ. ಮದ್ಯದ ಮೇಲೆ ಆಯಾ ರಾಜ್ಯ ಸರ್ಕಾರಗಳು ವಿಧಿಸುವ ಸುಂಕದ ಪ್ರಮಾಣದಲ್ಲಿನ ವ್ಯತ್ಯಾಸವೇ ಈ ಭಾರಿ ಅಂತರಕ್ಕೆ ಕಾರಣವೆನ್ನಲಾಗಿದೆ. ಗೋವಾದಲ್ಲಿ ಮೊದಲಿನಿಂದಲೂ ಅಬಕಾರಿ ಸುಂಕದ ಪ್ರಮಾಣ ಕಡಿಮೆಯೇ. ಗೋವಾದಲ್ಲಿ ಅಬಕಾರಿ ಸುಂಕದ ಪ್ರಮಾಣ ಶೇ.೫೫ರಷ್ಟಿದ್ದರೆ, ಕರ್ನಾಟಕದಲ್ಲಿ ಅದು ಶೇ. ೮೦ರಷ್ಟಿದೆ. ಕರ್ನಾಟಕದಲ್ಲಿನ ಅಬಕಾರಿ ಸುಂಕದ ಪ್ರಮಾಣ ಇಡೀ ದೇಶದಲ್ಲೇ ಅತಿ ಹೆಚ್ಚೆಂಬುದು ಮದ್ಯಪ್ರಿಯರ ಪಾಲಿಗೆ ಆತಂಕಕಾರಿಯಾಗಿದೆ.
ಮದ್ಯಪ್ರಿಯರಲ್ಲಿ ಅತ್ಯಂತ ಜನಪ್ರಿಯವಾಗಿರುವ ಬ್ಲಾö್ಯಕ್ ಲೇಬಲ್ ವಿಸ್ಕಿಯ ಬಾಟಲ್‌ವೊಂದಕ್ಕೆ ದೆಹಲಿಯಲ್ಲಿ ೩,೩೧೦ ರೂಪಾಯಿಗಳಿದ್ದರೆ, ಮುಂಬಯಿನಲ್ಲಿ ಅದರ ಬೆಲೆ ೪,೨೦೦. ಆದರೆ ಕರ್ನಾಟಕದಲ್ಲಿ ಬ್ಲಾö್ಯಕ್ ಲೇಬಲ್‌ನ ಬಾಟಲ್ ಬೆಲೆ ೫,೨೦೦ ರೂಪಾಯಿಗಳಾಗಿವೆ.
ಅಬಕಾರಿ ಸುಂಕದಲ್ಲಿನ ಈ ವ್ಯತ್ಯಾಸ ಒಂದು ದೇಶ, ಒಂದು ತೆರಿಗೆಯ ಘೋಷಣೆಯನ್ನು ಹುಸಿಯಾಗಿಸಿದ್ದು ಬರೀ ಘೋಷಣೆಯಾಗಿಯೇ ಉಳಿಯುವಂತೆ ಮಾಡಿದೆ. ಕೇಂದ್ರದ ವಿತ್ತ ಸಚಿವರು ಈ ವ್ಯತ್ಯಾಸವನ್ನು ಸರಿಪಡಿಸಲು ಯಾವುದೇ ನಿಶ್ಚಿತ ಕ್ರಮಕೈಗೊಳ್ಳದಿರುವುದು ಮದ್ಯಪ್ರಿಯರ ಪಾಲಿಗೆ ಕೆಲ ರಾಜ್ಯಗಳು ಹಿತಕರ ಅನಿಸಿದರೂ ಕರ್ನಾಟಕ ಬಲು ದುಬಾರಿ ಎಂದೆನಿಸಿರುವುದು ಮಾತ್ರ ಸತ್ಯ.