Home ತಾಜಾ ಸುದ್ದಿ ಕನ್ನಡ ಚಿತ್ರರಂಗದ ಹಿರಿಯನಟ ಸರಿಗಮ ವಿಜಿ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯನಟ ಸರಿಗಮ ವಿಜಿ ಇನ್ನಿಲ್ಲ

0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನರಾಗಿದ್ದಾರೆ.
ಕಳೆದ ಕಲವು ದಿನಗಳಿಂದ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಂದು ಕೊನೆಯುಸಿರೆಳೆದಿದ್ದಾರೆ. ಸರಿಗಮ ವಿಜಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 1 ಗಂಟಗೆ ಅಸ್ಪತ್ರೆಯಿಂದ ಮಹಾಲಕ್ಷ್ಮಿಪುರಂನಲ್ಲಿರುವ ವಿಜಯ್ ನಿವಾಸಕ್ಕೆ ಮೃತದೇಹ ರವಾನೆಯಾಗಲಿದೆ. ಮಧ್ಯಾಹ್ನ ಒಂದು ಗಂಟೆಯಿಂದ ನಾಳೆ 10 ಗಂಟೆವರೆಗೂ ಅಂತಿಮ ದರ್ಶನ‌ ನಡೆಯಲಿದ್ದು. ನಾಳೆ ಬೆಳಗ್ಗೆ 10 ಗಂಟೆ ನಂತರ ಚಾಮರಾಜಪೇಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆಯಲ್ಲಿ ನಡೆಯಲಿದೆ.

ಸರಿಗಮ ವಿಜಿ ಅವರ ಮೂಲ ಹೆಸರು ಆರ್. ವಿಜಯ್ ಕುಮಾರ್. ‘ಸಂಸಾರದಲ್ಲಿ ಸರಿಗಮ’ ನಾಟಕದ ಮೂಲಕ ಸರಿಗಮ ವಿಜಿ ಎಂಬ ಹೆಸರು ಬಂತು. ಕನ್ನಡ ಸಿನಿಮಾ ಬೆಳುವಲದ ಮಡಿಲಲ್ಲಿ (1975) ಮೂಲಕ ವಿಜಿ ಅವರು ಸ್ಯಾಂಡಲ್‌ವುಡ್ ಪ್ರವೇಶಿಸಿದರು. ವಿಜಿ ಅವರು ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಸುಮಾರು 80 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 2,400 ಧಾರಾವಾಹಿಗಳ ನಿರ್ದೇಶನದ ಜೊತೆಗೆ ನಟನೆ ಮಾಡಿದ್ದಾರೆ.

Exit mobile version