ವಿಜಯಪುರ: ತೊಗರಿ ಕಟಾವು ಯಂತ್ರ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ತಾಳಿಕೋಟೆ ಬಿಳೇಬಾವಿ ಕ್ರಾಸ್ ಬಳಿ ಈ ಘಟನೆ ಸಂಭವಿಸಿದ್ದು ಮೃತ ದುರ್ದೈವಿಗಳು ವಿಜಯಪುರದ ಅಲಿಯಾಬಾದ್ ನಿವಾಸಿಗಲು ಎನ್ನಲಾಗಿದೆ, ನಿಂಗಪ್ಪಾ ಪಾಟೀಲ್ ( 55), ಶಾಂತವ್ವ ಶಂಕರ ಪಾಟೀಲ್ (45),ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (45), ಹಾಗೂ ದಿಲೀಪ್ ಪಾಟೀಲ್ (50) ಎನ್ನುವವರು ಮೃತ ದುರ್ದೈವಿಗಳು, ತಾಳಿಕೋಟೆ ಪೊಲೀಸರು ಭೇಟಿ ನೀಡಿ ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಸನಬಾಗೇವಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.