Home ತಾಜಾ ಸುದ್ದಿ ಎಫ್ಐಆರ್ ಬಗ್ಗೆ ಗೊತ್ತೇ ಇಲ್ಲ ಎಂದ ಡಿಕೆಶಿ

ಎಫ್ಐಆರ್ ಬಗ್ಗೆ ಗೊತ್ತೇ ಇಲ್ಲ ಎಂದ ಡಿಕೆಶಿ

0

ಬಳ್ಳಾರಿ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಮೇಲೆ ಎಫ್ಐಆರ್ ಆಗಿರುವ ವಿಷಯ ನನಗೆ ಗೊತ್ತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಂಡೂರಿನಲ್ಲಿ ಪ್ರಚಾರದ ವೇಳೆ ಏಳುಬೆಂಚಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಎಚ್.ಡಿ. ಕುಮಾರಸ್ವಾಮಿ ಮೇಲೆ ಕೇಸ್ ದಾಖಲಾದ ಬಗ್ಗೆ ಏನು‌ ಹೇಳುತ್ತಿರಿ ಎನ್ನುವ ಪ್ರಶ್ನೆಗೆ ಕೇಸ್ ಆಗಿದಿಯಾ? ಯಾವ ವಿಚಾರಕ್ಕೆ? ಎಂದು ಮರು ಪ್ರಶ್ನಿಸಿದರು. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ ಅವರಿಗೆ ಬೆದರಿಕೆ, ಸುಳ್ಳು ಆರೋಪ ಕಾರಣಕ್ಕೆ ಎಂದು ಮಾಧ್ಯಮದವರಿಂದಲೇ ಕೇಳಿದ ಅವರು ಈ‌ ಬಗ್ಗೆ ನನಗೆ ಗೊತ್ತೇ ಇಲ್ಲ. ದೇವರು ಅವರಿಗೆ ಒಳ್ಳೆಯದು‌ ಮಾಡಲಿ ಎಂದು ಹೊರ ನಡೆದರು.

Exit mobile version