Home ತಾಜಾ ಸುದ್ದಿ ಉಪ್ಪು ತಿಂದವರು ನೀರು ಕುಡಿಯಲೇಬೇಕು

ಉಪ್ಪು ತಿಂದವರು ನೀರು ಕುಡಿಯಲೇಬೇಕು

0

ರಾಯಚೂರು: ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಬಹಳದಿನ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ, ನಾನು ಮೈಸೂರು ಉಸ್ತುವಾರಿ ಮಂತ್ರಿಯಾಗಿದ್ದೆ 7900 ಸೈಟ್‌ಗಳನ್ನ ಎರಡೂವರೆ ವರ್ಷದಲ್ಲಿ ರೆಡಿ ಮಾಡಿಸಿದೆ ಎಂದು ಹೇಳಿದರು. ಕೋವಿಡ್ ಮುಗಿದ ಮೇಲೆ ಹರಾಜು ಹಾಕಿಸಲು ಕ್ರಮ ತೆಗೆದುಕೊಂಡೆ. 15 ಸಾವಿರ ಕೋಟಿ ಬರುತ್ತೆ ಅಂತಾ ಮಾಡಿಸಿದೆ ಎಂದು ವಿವರಿಸಿದರು. ರಾತ್ರಿ ಒಂದು ಗಂಟೆಗೆ ನನಗೆ ಮೈಸೂರಿನಿಂದಲ್ಲೇ ಎತ್ತಂಗಡಿ ಆಯ್ತು. ನಾವು ತಿಳಿದುಕೊಂಡ ಮಟ್ಟದಲ್ಲಿ ಈ ಕೇಸ್ ಇಲ್ಲ, ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ ಈಗ ಚರ್ಚೆ ಮಾಡುವುದು ಅನಾವಶ್ಯಕ ನಾವು ಎಷ್ಟೇ ದೊಡ್ಡವರು ಆದ್ರೂ ಕಾನೂನಿನ ಮುಂದೆ ಯಾರು ದೊಡ್ಡವರು ಅಲ್ಲ, ಅಂಬೇಡ್ಕರ್ ಎಲ್ಲರಿಗೂ ಒಂದೇ ಕಾನೂನು ಮಾಡಿದ್ದಾರೆ ಎಂದು ತಿಳಿಸಿದರು.

ಯಾರು ಯೂಟರ್ನ್ ಹೊಡೆದಿಲ್ಲ: ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಚಿಂತಕರಲ್ಲಿ ಒಬ್ಬರು ಯಾರು ಯೂಟರ್ನ್ ಹೊಡೆದಿಲ್ಲ, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಆ ಮಟ್ಟದಲ್ಲಿ ಇದ್ದವರು. ಪ್ರಕರಣ ಕೋರ್ಟ್‌ನಲ್ಲಿ ಇದ್ದು ಗಂಭೀರವಾಗಿ ಚರ್ಚೆ ನಡೆಯುತ್ತಿದೆ. ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಹೊರಗೆ ಬರುತ್ತೆ, ರಾಜ್ಯಪಾಲರ ಹುದ್ದೆ ಆಯಾ ರಾಜ್ಯಗಳು ಗೌರವಿತ್ತಾ ಬಂದಿರುವ ಹುದ್ದೆ. ಕಾನೂನು ಸಂರಕ್ಷಣೆ ಮಾಡುವುದು ರಾಜ್ಯಪಾಲರ ಕರ್ತವ್ಯ ರಾಜ್ಯಪಾಲರ ತೀರ್ಮಾನ ಸರಿಯಾಗಿಯೆ ಇದೆ, ಪ್ರಕರಣ ಕೋರ್ಟ್‌ನಲ್ಲಿ ಇದ್ದು, ಕೋರ್ಟ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು.

ಕೋವಿಡ್ ಹಗರಣ : ಕಾಂಗ್ರೆಸ್ ಹೋರಾಟ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಬರೀ ಹುಲಿ ಬಂತೂ ಹುಲಿ ಅಂತಾರೆ ಎಂದು ಟೀಕಿಸಿದರು.

Exit mobile version