Home ತಾಜಾ ಸುದ್ದಿ ಈ ಸೋಲಿನ ಹೊಣೆ ನನ್ನದೇ…

ಈ ಸೋಲಿನ ಹೊಣೆ ನನ್ನದೇ…

0

ವೋಟಿಗೆ ೨ ಸಾವಿರ ಕೊಟ್ಟು ಮತಗಳನ್ನು ಖರೀದಿ‌ ಮಾಡಿದರು. ಹಣ, ಮದ್ಯದ ಬಲದಿಂದ ಗೆದ್ದಿದೆ

ಬಳ್ಳಾರಿ: ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುವೆ. ಮತದಾರರ ತೀರ್ಪು ಗೌರವಿಸುವೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ‌ಬಂಗಾರಿ‌ ಹನುಮಂತು ‌ಹೇಳಿದರು.
ಬಳ್ಳಾರಿಯ ಸರಕಾರಿ ಪಾಲಿಟೆಕ್ನಿಕ್ ‌ಕಾಲೇಜಿನ ಮತ ಎಣಿಕೆ‌ ಕೇಂದ್ರದಿಂದ ಹೊರಬಂದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ಈ ಸೋಲಿನ ಹೊಣೆಯನ್ನು ಯಾರ ಮೇಲೂ‌ ಹೊರಿಸಲ್ಲ. ಕಾಂಗ್ರೆಸ್ ‌ಹಣ ಬಲದಿಂದ‌‌ ಈ ಚುನಾವಣೆ ಗೆದ್ದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಇಲ್ಲಿಯೇ ಠಿಕಾಣಿ ಹೂಡಿದ್ದರು. ಸಚಿವ ಶಿವರಾಜ ತಂಗಡಗಿ ಉಸ್ತುವಾರಿ ‌ಹೊತ್ತಿದ್ದ ಪ್ರದೇಶ ಸೇರಿ ಸಚಿವ ಸಂಪುಟದ ಸಚಿವರು ಇದ್ದ ಪ್ರದೇಶದಲ್ಲಿ ನಮಗೆ ಹಿನ್ನಡೆ ಆಗಿದೆ. ಅಂಕಿ-ಅಂಶಗಳ ಪ್ರಕಾರ ಈ ಸೋಲು ನಮಗೆ ಸೋಲೆ ಅಲ್ಲ. ಚುನಾವಣೆ ಹತ್ತಿರ ಇದ್ದಾಗ ಎಲ್ಲ‌ ಮಹಿಳೆಯರ ಖಾತೆಗೆ ೨ ಸಾವಿರ ಹಣ ಹಾಕಿದರು. ವೋಟಿಗೆ ೨ ಸಾವಿರ ಕೊಟ್ಟು ಮತಗಳನ್ನು ಖರೀದಿ‌ ಮಾಡಿದರು. ಹಣ, ಮದ್ಯದ ಬಲದಿಂದ ಕಾಂಗ್ರೆಸ್ ಗೆದ್ದಿದೆ. ೨೦೨೮ ರಲ್ಲಿ ಸಂಡೂರಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. ನಾನು ಅಲ್ಲಿಯೇ ಮನೆ ಮಾಡಿ ಜನರ ಜತೆ ಇರುತ್ತೇನೆ. ೨೦೨೮ರಲ್ಲಿ ಯಾರೇ ಅಭ್ಯರ್ಥಿ ಆಗಲಿ‌ ಒಗ್ಗಟ್ಟಿನಿಂದ ಹೋರಾಟ‌ ಮಾಡುತ್ತೇವೆ. ತುಕಾರಾಂ, ಸಂತೋಷ ‌ಲಾಡ್ ಯಾರೇ ಸ್ಪರ್ಧೆ ಮಾಡಿದರೂ ಅವರನ್ನು ಸೋಲಿಸುತ್ತೇವೆ ಎಂಸು ಹೇಳಿದರು.

Exit mobile version