Home ನಮ್ಮ ಜಿಲ್ಲೆ ಚಿಕ್ಕಮಗಳೂರು ಇದ್ದಕ್ಕಿದ್ದಂತೆ ಕುಸಿದು ಬಿದ್ದ ನಾಡಕಚೇರಿ

ಇದ್ದಕ್ಕಿದ್ದಂತೆ ಕುಸಿದು ಬಿದ್ದ ನಾಡಕಚೇರಿ

0

ಕೊಪ್ಪ: ನಾಡಕಚೇರಿ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪಟ್ಟಣದಲ್ಲಿ ನಡೆದಿದೆ.

ಕಚೇರಿಯಲ್ಲಿ ಅಧಿಕಾರಿಗಳು, ಜನಸಾಮಾನ್ಯರು ಇದ್ದಾಗಲೇ ಕಚೇರಿಯ ಮೇಲ್ಟಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕಚೇರಿಯೂ ಸುಮಾರು 50 ವರ್ಷ ಹಳೆಯದಾಗಿದೆ.

ಈ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕಟ್ಟಡದ ಮೇಲ್ಟಾವಣಿ ಕುಸಿದಿದೆ. ಹಳೆಯ ಸರ್ಕಾರಿ ಶಾಲೆಯನ್ನು ಕಳೆದ ವರ್ಷ ಐದು ಲಕ್ಷ ವೆಚ್ಚ ಮಾಡಿ ನಾಡಕಚೇರಿಯನ್ನಾಗಿ ಪರಿವರ್ತಿಸಲಾಗಿತ್ತು. ಆದರೆ ಇದೀಗ ದಿಢೀರನೆ ಕುಸಿದು ಬಿದ್ದಿರುವುದರಿಂದ ಕಚೇರಿಯಲ್ಲಿದ್ದ ಹಲವು ದಾಖಲೆಗಳಿಗೆ ಹಾನಿಯಾಗಿದೆ.

Exit mobile version