Home ತಾಜಾ ಸುದ್ದಿ ಆರ್‌.ಅಶೋಕ್‌ ವಿರುದ್ಧ ನೂರಾರು ಕೋಟಿ ಭೂ ಹಗರಣದ ದಾಖಲೆ ಬಿಡುಗಡೆ

ಆರ್‌.ಅಶೋಕ್‌ ವಿರುದ್ಧ ನೂರಾರು ಕೋಟಿ ಭೂ ಹಗರಣದ ದಾಖಲೆ ಬಿಡುಗಡೆ

0

ಬೆಂಗಳೂರು : ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ಮೌಲ್ಯದ ಜಮೀನಿನ ಹಗರಣದ ದಾಖಲೆಯನ್ನು ಕಾಂಗ್ರೆಸ್​​ ಸಚಿವರು ಬಿಡುಗಡೆ ಮಾಡಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮತ್ತು ಸಚಿವ ಎಚ್.ಕೆ. ಪಾಟೀಲ್ ಅವರು ಆರ್.ಅಶೋಕ್ ವಿರುದ್ಧದ ದಾಖಲೆ ಬಿಡುಗಡೆ ಮಾಡಿದ್ದಾರೆ.
ಲೊಟ್ಟೆಗೊಲ್ಲಹಳ್ಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನಿನ ಹಗರಣ ನಡೆದಿದೆ. ಲೊಟ್ಟೆಗೊಲ್ಲಹಳ್ಳಿ ಸರ್ವೆ ನಂಬರ್ 10/1 ರಲ್ಲಿ 32 ಗುಂಟೆ ಜಮೀನನ್ನು ಬಿಡಿಎ ನೋಟಿಫೈ ಮಾಡಿತ್ತು. 1977 ಫೆಬ್ರವರಿಯಲ್ಲಿ ಬಿಡಿಎ ಭೂಸ್ವಾಧೀನಕ್ಕೆ ಮೊದಲ ನೊಟಿಫಿಕೇಷನ್ ಹೊರಡಿಸಿತ್ತು. 2003ರ ಫೆ.26 ಹಾಗೂ 2007ರಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ. ಈ ಹಿಂದೆ ಬಿಡಿಎ ನೊಟಿಫಿಕೇಷನ್ಗೂ ಮೊದಲು ಈ ಜಮೀನು ರಾಮಸ್ವಾಮಿ ಎಂಬವರ ಒಡೆತನದಲ್ಲಿತ್ತು. ಬಳಿಕ ಈ ಜಮೀನು 26 ವರ್ಷ ಬಿಡಿಎ ಒಡೆತನದಲ್ಲಿತ್ತು. ಆದರೆ 2003ರಲ್ಲಿ ಒಂದು ಬಾರಿ ಹಾಗೂ 2007ರಲ್ಲಿ ಆರ್ ಅಶೋಕ್ ಕ್ರಯಪತ್ರ ಮಾಡಿಕೊಂಡಿದ್ದಾರೆ ಏಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

Exit mobile version