Home ತಾಜಾ ಸುದ್ದಿ ಆಂಥೆಮ್ ಆಫ್ ಮಾರ್ಟಿನ್ ಅನಾವರಣ

ಆಂಥೆಮ್ ಆಫ್ ಮಾರ್ಟಿನ್ ಅನಾವರಣ

0

ಮಾರ್ಟಿನ್ ಚಿತ್ರದ ನಾಯಕನ ಪರಿಚಯಾತ್ಮಕ ಹಾಡು (ಆಂಥೆಮ್ ಆಫ್) ಇಂದು ಬಿಡುಗಡೆಗೊಂಡಿದೆ.
ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಧ್ರುವ ಬಹು ನೋಟದಲ್ಲಿ ಕಾಣಿಸಿಕೊಂಡಿದ್ದು, ಮಣಿ ಶರ್ಮಾ ಅವರ ಸಂಗೀತ ಸಂಯೋಜನೆಯಲ್ಲಿ ಪೃಧ್ವಿ ಚಂದ್ರು ಹಾಡಿದ್ದಾರೆ ಮತ್ತು ನಿರ್ದೇಶಕ ಎ.ಪಿ. ಅರ್ಜುನ್ ಮತ್ತು ಶ್ರೀಮಣಿ ಅವರ ಸಾಹಿತ್ಯವನ್ನು ಒಳಗೊಂಡಿದೆ, 2021 ರಿಂದ ಚಿತ್ರಿಕರಣ ನಡೆದಿದ್ದ ಮಾರ್ಟಿನ್ ಅಕ್ಟೋಬರ್ 11 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಮಾರ್ಟಿನ್ ಕೇವಲ ಕನ್ನಡ ಚಿತ್ರ ಮಾತ್ರ ಅಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಮಾತ್ರ ಅಲ್ಲ. ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ. ಕನ್ನಡದ ಜೊತೆ ಜೊತೆಯಲ್ಲಿ ಹಿಂದಿ, ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ವಿದೇಶಿ ಭಾಷೆಯಲ್ಲಿ ಸುಮಾರು 3,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Anthem Of Martin | Dhruva Sarja, Vaibhavi S | AP Arjun | Mani Sharma | Prudhvi Chandra

Exit mobile version