Home ತಾಜಾ ಸುದ್ದಿ ಅವರು ಹೇಳಿಕೆ ಬದಲಿಸಿದರೆ ಏನು ಮಾಡಬೇಕು?

ಅವರು ಹೇಳಿಕೆ ಬದಲಿಸಿದರೆ ಏನು ಮಾಡಬೇಕು?

0

ಮೀಸಲಾತಿ ಸಮಸ್ಯೆಯನ್ನು ಯಾರು ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಬೇಕು

ಬೆಳಗಾವಿ: ಸರ್ಕಾರ ಉತ್ತರ ಕರ್ನಾಟಕದ ಚರ್ಚೆಗೂ ಸಿದ್ಧವಿದೆ. ವಕ್ಫ್ ಮಂಡಳಿ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ ಸ್ವತಃ ಅನ್ವರ್ ಮಾಣಿಪ್ಪಾಡಿ ಅವರೇ ಹಿಂದೆ ವಿಜಯೇಂದ್ರ ತಮಗೆ ₹150 ಕೋಟಿ ಹಣದ ಆಮಿಷ ಒಡ್ಡಿದ್ದರು ಎಂದು ಹೇಳಿದ್ದರ ಮೇಲೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಅವರೇ ಪತ್ರಿಕಾಗೋಷ್ಠಿ ಕರೆದು ನೀಡಿರುವ ಹೇಳಿಕೆಗೆ ನನ್ನ ಪ್ರಕಾರ ನಾವು ಪ್ರತಿಕ್ರಿಯೆ ನೀಡಿರುವುದು ಸರಿಯಾಗಿದೆ. ಈಗ ಬಹಳ ವರ್ಷಗಳ ನಂತರ ಹಿಂದೆ ಹಾಗೆ ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ. ಅವರು ಹೇಳಿಕೆ ಬದಲಿಸಿದರೆ ಏನು ಮಾಡಬೇಕು? ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವ ಸಂಬಂಧ ಯಾರು ಸಮಸ್ಯೆಯನ್ನು ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಬೇಕು. ಹಿಂದೆ ಇದ್ದದ್ದು ಪ್ರಲ್ಹಾದ್ ಜೋಷಿಯವರ ಬಿಜೆಪಿ ಸರ್ಕಾರ, ನಿಜವಾಗಿ ಅವರು ಸಮುದಾಯದ ಕ್ಷಮೆ ಕೇಳಬೇಕು ಎಂದರು.

Exit mobile version