Home ತಾಜಾ ಸುದ್ದಿ ಅರವಿಂದ ಬೆಲ್ಲದಗೆ ಕಲ್ಲೇಟು

ಅರವಿಂದ ಬೆಲ್ಲದಗೆ ಕಲ್ಲೇಟು

0

ಬೆಳಗಾವಿ: ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಶಾಸಕ ಅರವಿಂದ ಬೆಲ್ಲದಗೆ ಕಲ್ಲೇಟು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಿಗ್ಗಾ ಮುಗ್ಗಾ ಲಾಠಿ ಬೀಸಿದರು‌. ರೊಚ್ಚಿಗೆದ್ದ ಪೊಲೀಸರು ಮೇಲೆ ಕಲ್ಲು, ಚಪ್ಪಲಿ ತೂರಿದರು. ಇದರಿಂದ ಕೆಲ ಪ್ರತಿಭಟನಾಕಾರ ತಲೆ ಒಡೆದು ರಕ್ತ ಚೆಲ್ಲಿತು. ಹಲವರ ಕೈಗಳಿಗೆ ಪೆಟ್ಟು ಬಿದ್ದಿತು. ಅಷ್ಟೋತ್ತಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಂದು ಹೆದ್ದಾರಿ ತಡೆದು ಧರಣಿಗಿಳಿದಾಗ ಕೆಲವರನ್ನು ಬಸ್‌ನಲ್ಲಿ ಹತ್ತಿಸಿದರು. ಆಗ ಶಾಸಕರಾದ ಬಸನಗೌಡ ಯತ್ನಾಳ, ಈರಣ್ಣ ಕಡಾಡಿ, ಅರವಿಂದ ಬೆಲ್ಲದ ಮತ್ತಿತರರು ಪೊಲೀಸ್ ವಾಹನಗಳನ್ನು ಬಿಗಿಯಾಗಿ ಹಿಡಿದರು. ಈ ವೇಳೆ ಕಲ್ಲೇಟು ಬಿದ್ದಿದೆ ಎಂದು ತಿಳಿದು ಬಂದಿದೆ.

Exit mobile version