Home ನಮ್ಮ ಜಿಲ್ಲೆ ಉಡುಪಿ ಅಯೋಧ್ಯೆಯಲ್ಲಿ ಕೊನೆಯುಸಿರೆಳೆದ ಉಡುಪಿ ರಾಮಭಕ್ತ

ಅಯೋಧ್ಯೆಯಲ್ಲಿ ಕೊನೆಯುಸಿರೆಳೆದ ಉಡುಪಿ ರಾಮಭಕ್ತ

0

ಉಡುಪಿ: ರಾಮಲಲ್ಲಾ ದರ್ಶನ ಪಡೆಯಲು ಉಡುಪಿಯಿಂದ ಅಯೋಧ್ಯೆಗೆ ತೆರಳಿದ್ದ ಭಕ್ತರೊಬ್ಬರು, ರಾಮನ ದರ್ಶನ ಪಡೆದು ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ಉಡುಪಿಯ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಪಾಂಡುರಂಗ ಶಾನುಭೋಗ್ ಮೃತರು. ಇವರು, ಬೆಳಗ್ಗೆ ರಾಮಲಲ್ಲಾನಿಗೆ ಕೈಮುಗಿದು, ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ಪ್ರಸಾದ ಪಡೆದಿದ್ದರು. ಮಧ್ಯಾಹ್ನ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವ ವೇಳೆ ಹೃದಯಘಾತ ಸಂಭವಿಸಿ ನಿಧನರಾಗಿದ್ದಾರೆ. ದೃಷ್ಟಿ ಇಲ್ಲದಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.

Exit mobile version