Home ಅಪರಾಧ ಅಪಘಾತ: ತಂದೆ, ಮಗ ಸಹಿತ ಮೂವರು ಸಾವು

ಅಪಘಾತ: ತಂದೆ, ಮಗ ಸಹಿತ ಮೂವರು ಸಾವು

0

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ತಂದೆ ಮಗನ ಸಹಿತ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಪುತ್ತುರೂ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಬೈಪಾಸ್‌ನಲ್ಲಿ ಇಂದು ನಡೆದಿದೆ.
ಮೃತರನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ(೮೫), ಅವರ ಪುತ್ರ ಚಿದಾನಂದ ನಾಯ್ಕ(೫೮) ಮತ್ತು ನೆರೆಮನೆ ನಿವಾಸಿ ರಮೇಶ್ ನಾಯ್ಕ(೬೮) ಎಂದು ಗುರುತಿಸಲಾಗಿದೆ. ಇವರು ಆಲ್ಟೋ ಕಾರಿನಲ್ಲಿ ಗೋಂದೊಳ್ ಪೂಜೆಗೆ ಪುತ್ತೂರಿನ ಪುಣಚಕ್ಕೆ ಆಗಮಿಸಿದ್ದರು. ಹಿಂತಿರುಗುವ ವೇಳೆ ಮುಂಜಾನೆ ಸುಮಾರು ೪.೧೫ರ ವೇಳೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದ್ದು ಬೆಳಕು ಹರಿದ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿತ್ತು.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಉದಯ ರವಿ ಹಾಗೂ ಎಫ್ಎಸ್ಐಎಲ್ ತಂಡದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version