Home ಅಪರಾಧ ಅನ್ಯಕೋಮಿನ ಯುವಕನಿಂದ ಯುವತಿಗೆ ಚಾಕು ಹಾಕುವ ಬೆದರಿಕೆ

ಅನ್ಯಕೋಮಿನ ಯುವಕನಿಂದ ಯುವತಿಗೆ ಚಾಕು ಹಾಕುವ ಬೆದರಿಕೆ

0

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ವ್ಯಾಪ್ತಿಯಲ್ಲಿ ಹಳೇ ಹುಬ್ಬಳ್ಳಿಯ ಸಮಿ ಎನ್ನುವ ವ್ಯಕ್ತಿ ಯುವತಿಗೆ ತನ್ನೊಂದಿಗೆ ಬರದಿದ್ದರೆ ಚಾಕು ಹಾಕುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ನಡೆದ ಪ್ರಕರಣ ಈಗ ದಾಖಲಾಗಿದೆ. ಶಿರೂರ ಪಾರ್ಕ್ ಬಳಿ ಹೋಗಿ ಯುವತಿಯೊಬ್ಬರನ್ನು ಆರೋಪಿ ತನ್ನೊಂದಿಗೆ ಬಾ ಎಂದು ಕರೆದಿದ್ದನಂತೆ. ಅಲ್ಲದೇ ಆಕೆಯ ಕೈ ಹಿಡಿದು ಎಳೆದಾಡಿದ್ದ. ಯುವತಿ ಅವನ ಜತೆಗೆ ಹೋಗಲು ಒಪ್ಪಿರಲಿಲ್ಲ. ಬರದೇ ಇದ್ದರೆ ಚಾಕು ಹಾಕುತ್ತೇನೆ. ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಯುವತಿ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೆದರಿಕೆ ಹಾಕಿರುವ ಸಮಿ ಎನ್ನುವವನನ್ನು ಬಂಧಿಸಿದ್ದಾರೆ.

Exit mobile version