Home ತಾಜಾ ಸುದ್ದಿ ಅಡ್ಜಸ್ಟಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್

ಅಡ್ಜಸ್ಟಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್

0

ಹಾವೇರಿ: ವಕ್ಪ್ ವಿಚಾರದಲ್ಲಿ ನನ್ನ ಮೇಲೂ ಕೇಸ್ ಹಾಕಿದ್ದಾರೆ. ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ,ಸಿ.ಟಿ ರವಿ ಬೊಮ್ಮಾಯಿ ಮೇಲೂ ಕೇಸ್ ಹಾಕಿದ್ದಾರೆ. ಇಲ್ಲಿ ಅಡ್ಜಸ್ಟಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಹಿರೇಬೆಂಡಿಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಪ್ರಚಾರಕ್ಕೆ ಬಂದ ವೇಳೆ ಮಾತನಾಡಿದ ಅವರು ಹಾವೇರಿ ರೈತನ ಆತ್ಮಹತ್ಯೆ ವಿಚಾರದಲ್ಲಿ ಸಾಲ ಹೆಚ್ಚಾಗಿತ್ತು ಅಂತ ಪೊಲೀಸರು ಸ್ಟೇಟಮೆಂಟ್ ಮಾಡಿದ್ದಾರೆ. 5 ಲಕ್ಷರೂ. ಪರಿಹಾರದ ಸಂಬಂಧ ರೈತರು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಇದೇ ಶಿವಾನಂದ ಪಾಟೀಲ ರೈತರು 2 ವರ್ಷ ಬರಗಾಲ ಬರಲಿ ಅಂತ ಬೇಡ್ಕೊತಾರೆ ಅಂತ‌ ಹೇಳಿದ್ದರು. ಅದಕ್ಕೆ 5 ಕೋಟಿ ಕೊಡ್ತೀನಿ ಆತ್ಮಹತ್ಯೆ ಮಾಡಿಕೊ ಅಂದಿದ್ದೆ. ಹಣಕ್ಕಾಗಿ ರೈತರು ಏನು ಬೇಕಾದರೂ ಮಾಡ್ತಾರೆ ಅನ್ನೋ ಭಾವನೆ ಈ ಸರ್ಕಾರಕ್ಕೆ ಇದೆ, ತಮ್ಮ ಭಾಷಣ ಕೇಳದಿದ್ದರೆ ಗೃಹಲಕ್ಷ್ಮಿ ಯೋಜನೆಯ ₹ 2,000 ನಿಲ್ಲಿಸುವುದಾಗಿ ಹೇಳಿರುವ ಅವರಿಗೆ ತಾನು 5 ಕೋಟಿ ರೂ. ಕೊಡುತ್ತೇನೆ, ಸತ್ತು ತೋರಿಸು ಅಂತ ಹೇಳಿದ್ದೇನೆ, ಪಾಟೀಲ್ ಹೇಳಿದ್ದು ಸರಿ ಅಂತ ಸಮರ್ಥನೆ ಮಾಡಿಕೊಂಡ ಡಿಕೆ ಶಿವಕುಮಾರ್​ಗೆ ಸಾವಿಗೆ ಶರಣಾದರೆ ₹ 50 ಕೋಟಿ ಕೊಡೋದಾಗಿ ಹೇಳಿರುವೆ ಎಂದರು.

Exit mobile version