Home ಅಪರಾಧ ಅಂತಾರಾಜ್ಯ ಗಾಂಜ ಮಾರಾಟಗಾರನ ಬಂಧನ

ಅಂತಾರಾಜ್ಯ ಗಾಂಜ ಮಾರಾಟಗಾರನ ಬಂಧನ

0

888 ಗ್ರಾಂ ಗಾಂಜಾ ವಶ, 96 ಲಕ್ಷ ಹಾಗೂ ಕಾರು ವಶ

ಹುಬ್ಬಳ್ಳಿ: ರೈಲ್ವೆ ಸ್ಟೇಷನ್ ಹತ್ತಿರ ಗಾಂಜಾ ಸಾಗಟ ಮಾಡುತ್ತಿದ್ದ ಆರೋಪಿಯನ್ನು ‌ಬಂಧಿಸಿ ೮೮೮ ಗ್ರಾಂ ಗಾಂಜಾ, ೯೬ ಲಕ್ಷ ರೂ., ಕಾರು ಹಾಗೂ ವಿವಿಧ ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ತಿಳಿಸಿದರು.‌
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ರಾಜಸ್ಥಾನ ಮೂಲದ ಓಂ ಪ್ರಕಾಶ ಬಾರಮೇರ ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಶಹರ ಪೊಲೀಸ್ ಠಾಣೆಯ ಅಧಿಕಾರಿ ನೇತೃತ್ವದ ತಂಡ ಕಾರ್ಯಾಚರಣೆ‌ ನಡೆಸಿ ಬಂಧಿಸಲಾಗಿದೆ.
ರೈಲ್ವೆ ಪೊಲೀಸ್ ಸ್ಟೇಷನ್ ಹತ್ತಿರ ಬಂಧಿಸಿದಾಗ ೨೪೫ ಗ್ರಾಂ ಗಾಂಜಾ ದೊರೆಕಿದೆ. ಬಳಿಕ ವಿಚಾರಣೆ ನಡೆಸಿದಾಗ ಕೇಶ್ವಾಪುರದಲ್ಲಿ ವಾಸವಿದ್ದ ಮನೆಯಲ್ಲಿ ಗಾಂಜಾ ಇರುವುದು ತಿಳಿಸಿದ್ದು, ಮನೆಗೆ ಭೇಟಿ ನೀಡಿ ಪರಿಶೀಲಿಸಿ ೬೪೩ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿ ೯೦.೫೦ ಲಕ್ಷ ಹಣ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಹಣ ಹೂಡಿಕೆ ಜನಸಾಮಾನ್ಯರಿಗೆ ವಂಚಿಸುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದರು.
ಪ್ರತಿ ಠಾಣೆಗೆ ಗಾಂಜಾ ತನಿಖೆ ನಡೆಸಲು ಓರ್ವ ಅಧಿಕಾರಿ‌ ನೇಮಿಸಲಾಗಿದೆ. ೭೦ ಪ್ರಕರಣ ದಾಖಲಾಗಿದೆ. ೩೧೫ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಚಿಕ್ಕಮಠ, ಶಿವಪ್ರಕಾಶ ನಾಯಕ ಸೇರಿದಂತೆ ಶಹರ ಠಾಣೆ ಸಿಪಿಐ ತಹಶೀಲ್ದಾರ ಇದ್ದರು.

Exit mobile version