Home ತಾಜಾ ಸುದ್ದಿ ನಾಡಿನ ಹಿತಕ್ಕಾಗಿ ಸಿದ್ದರಾಮಯ್ಯನವರು ಪದತ್ಯಾಗ ಮಾಡುವುದೇ ಒಳಿತು

ನಾಡಿನ ಹಿತಕ್ಕಾಗಿ ಸಿದ್ದರಾಮಯ್ಯನವರು ಪದತ್ಯಾಗ ಮಾಡುವುದೇ ಒಳಿತು

0

ಬೆಂಗಳೂರು: ನಾಡಿನ ಹಿತಕ್ಕಾಗಿ ಸಿದ್ದರಾಮಯ್ಯನವರು ಪದತ್ಯಾಗ ಮಾಡುವುದೇ ಒಳಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಸಂಗೀತಕ್ಕೆ, ವಾಣಿಜ್ಯೋದ್ಯಮಕ್ಕೆ, ಶಿಕ್ಷಣಕ್ಕೆ ಸುಪ್ರಸಿದ್ಧವಾಗಿದ್ದ ಅವಳಿ ನಗರ ಹುಬ್ಬಳ್ಳಿ-ಧಾರವಾಡ ಈಗ ಹೆಣ್ಣುಮಕ್ಕಳ ಮೇಲಿನ ಹಲ್ಲೆಗೆ ಕುಖ್ಯಾತಿ ಪಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಕುಂಭಕರ್ಣನಂತೆ ನಿದ್ರಾವಸ್ಥೆಯಲ್ಲಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ. ಹೆಣ್ಣುಮಕ್ಕಳಿಗೆ ಹಾಡುಹಗಲೇ ಸುರಕ್ಷೆ ಇಲ್ಲ, ಇನ್ನು ರಾತ್ರಿಯಂತೂ ಕೇಳುವ ಹಾಗೇ ಇಲ್ಲ. ಇಂತಹ ದುಃಸ್ಥಿತಿ ಬಂದಿದ್ದರೂ ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಅಸಡ್ಡೆಯಿಂದಿರುವುದು ನಾಚಿಕೆಗೇಡು. ಓಲೈಕೆ ಮಾಡುವುದರಲ್ಲಿರುವ ಆಸಕ್ತಿ ಸಿದ್ದರಾಮಯ್ಯನವರಿಗೆ ಸುಭದ್ರ ಕಾನೂನು ವ್ಯವಸ್ಥೆ ಒದಗಿಸುವುದರಲ್ಲಿಲ್ಲ. ನಾಡಿನ ಹಿತಕ್ಕಾಗಿ ಸಿದ್ದರಾಮಯ್ಯನವರು ಪದತ್ಯಾಗ ಮಾಡುವುದೇ ಒಳಿತು ಎಂದಿದ್ದಾರೆ.

Exit mobile version