Home ಅಪರಾಧ ಅಂಜಲಿ ಕೊಲೆ ಪ್ರಕರಣ: ಆರೋಪಿ ಕೋಮಾದಲ್ಲಿ

ಅಂಜಲಿ ಕೊಲೆ ಪ್ರಕರಣ: ಆರೋಪಿ ಕೋಮಾದಲ್ಲಿ

0

ಹುಬ್ಬಳ್ಳಿ: ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ರೈಲ್ವೆ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ. ತಲೆಗೆ ಗಂಭೀರವಾದ ಗಾಯಗಳಾಗಿರುವದರಿಂದ ಏನೂ ಹೇಳುವ ಸ್ಥಿತಿಯಲ್ಲಿ ಆರೋಪಿ ಇಲ್ಲ ಎಂದು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳಿದರು.
ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ಆರೋಪಿ ವಿಶ್ವ ಅಲಿಯಾಸ್ ಗಿರಿಯನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಬುಧವಾರ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಎಂಟು ತಂಡವನ್ನು ನಾವು ರಚನೆ ಮಾಡಿದ್ದೆವು.
ನಿನ್ನೆ ರೇಲ್ವೆ ಪೊಲೀಲಸರ ಸಹಾಯದಿಂದ ಆರೋಪಿ ಸಿಕ್ಕಿದ್ದಾನೆ. ಆರೋಪಿ ಗಿರೀಶ್‍ಗೆ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ. ಸದ್ಯ ಕೋಮಾ ಸ್ಟೇಜ್‍ನಲ್ಲಿದ್ದಾನೆ. ರೈಲಿನಿಂದ ಯಾಕೆ ಬಿದ್ದ ಎನ್ನುವುದಕ್ಕೆ ಅವನು ಹೇಳಿಕೆ ಕೊಟ್ಟಾಗ ಗೊತ್ತಾಗುತ್ತದೆ. ಬೆಳಗಿನ ಜಾವ 4.30 ಕ್ಕೆ ನಮ್ಮ ಕಷ್ಟಡಿಗೆ ಬಂದಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಮಹಾರಾಷ್ಟ್ರ ಅಥವಾ ಗೋವಾದಲ್ಲಿ ತಲೆಮರೆಸಿಕೊಳ್ಳಬೇಕು ಎಂದುಕೊಂಡು ರೈಲು ಹಾಗೂ ಬಸ್‌ನಲ್ಲಿ ಓಡಾಡಿರುವದು ಗೊತ್ತಾಗಿದೆ. ಮೈಸೂರಿನಿಂದ ಗೋವಾ ಮಹಾರಾಷ್ಟ್ರ ಕಡೆ ತಲೆಮರೆಸಿಕೊಳ್ಳಬೇಕು ಎಂದು ಮಾಡಿಕೊಂಡಿದ್ದ ಎಂದರು.
ಅವನಿಗೆ ಪ್ರಜ್ಞೆ ಬಂದರ ನಂತರ ಹೇಳಿಕೆ ಪಡೆದುಕೊಳ್ಳಲಾಗುವುದು. ಈತನ ಮೇಲೆ ನಾಲ್ಕು ಬೈಕ್ ಕಳ್ಳತನ ಪ್ರಕರಣಗಳು ಇವೆ ಎಂದು ಅವರು ಮಾಹಿತಿ ನೀಡಿದರು.

Exit mobile version