Home ತಾಜಾ ಸುದ್ದಿ ಅಂಜನಾಪುರ ಜಲಾಶಯ ಭರ್ತಿ: ಬಾಗಿನ ಸಮರ್ಪಣೆ

ಅಂಜನಾಪುರ ಜಲಾಶಯ ಭರ್ತಿ: ಬಾಗಿನ ಸಮರ್ಪಣೆ

0

ಬೆಂಗಳೂರು: “ಮೈದುಂಬಿಕೊಂಡ ಅಂಜನಾಪುರ – ರೈತನ ಮೊಗದಲ್ಲಿ ಹರ್ಷೋದ್ಗಾರ” ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ತುಂಗಾ ಜಲಾಶಯ ವ್ಯಾಪ್ತಿಯಲ್ಲಿ ಹಾಗೂ ಶಿಕಾರಿಪುರ ತಾಲ್ಲೂಕಿನಾದ್ಯಂತ ಉತ್ತಮ ವರ್ಷಧಾರೆ ಹಿನ್ನಲೆಯಲ್ಲಿ ತಾಲ್ಲೂಕಿನ ಅನ್ನದಾತನ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿ ತನ್ನ ವೈಭವವನ್ನು ಮರಳಿ ಪಡೆದಿದ್ದು ಇಂದು ಜಲಸಂಪನ್ಮೂಲ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ “ಬಾಗಿನ ಸಮರ್ಪಣೆ” ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ ಅವರೊಂದಿಗೆ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಕುಟುಂಬ ಸಮೇತರಾಗಿ ಮೈದುಂಬಿ ಹರಿಯುತ್ತಿರುವ ಜಲಾಶಯಕ್ಕೆ ಬಾಗಿನ ಸಮರ್ಪಿಸಲಾಯಿತು ಎಂದಿದ್ದಾರೆ.

Exit mobile version