Home ನಮ್ಮ ಜಿಲ್ಲೆ ಬೆಂಗಳೂರು ಬಿಲೈವ್ ಇಝಿಯ ಇವಿ ಬಾಡಿಗೆಯ ಫ್ರಾಂಚೈಸಿ ಜನಪ್ರಿಯ: ಬೆಂಗಳೂರಿನಲ್ಲಿ 5,000 ಇವಿ ವಾಹನಗಳ ದುಪ್ಪಟ್ಟುಗೊಳಿಸಲು ಸಜ್ಜು

ಬಿಲೈವ್ ಇಝಿಯ ಇವಿ ಬಾಡಿಗೆಯ ಫ್ರಾಂಚೈಸಿ ಜನಪ್ರಿಯ: ಬೆಂಗಳೂರಿನಲ್ಲಿ 5,000 ಇವಿ ವಾಹನಗಳ ದುಪ್ಪಟ್ಟುಗೊಳಿಸಲು ಸಜ್ಜು

0

ಬೆಂಗಳೂರು: ಭಾರತದ ಮುಂಚೂಣಿಯ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್ ಫಾರಂ ಬಿಲೈವ್ ಬೆಂಗಳೂರಿನಲ್ಲಿ ತನ್ನ ಇವಿ ವಾಹನಗಳ ಪ್ರಮುಖ ವಿಸ್ತರಣೆಯನ್ನು 5,000 ಹೆಚ್ಚುವರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ನಿಯೋಜನೆಯೊಂದಿಗೆ ಪ್ರಕಟಿಸಿದ್ದು ಇದು ಝೆಪ್ಟೊ, ಬ್ಲಿಂಕಿಟ್ ಮತ್ತು ಬಿಗ್ ಬ್ಯಾಸ್ಕೆಟ್ ನಂತಹ ಕ್ಯೂ-ಕಾಮರ್ಸ್ ಪ್ಲಾಟ್ ಫಾರಂಗಳಿಗೆ ಕೊನೆಯ ಹಂತದ ಪೂರೈಕೆಯನ್ನು ನೀಡುತ್ತದೆ.

ಈ ವಿಸ್ತರಣೆಯು ಬಿಲೈವ್ ಇಝಿಯ ತೀವ್ರವಾದ ರಾಷ್ಟ್ರವ್ಯಾಪಿ ಪ್ರಗತಿಯೊಂದಿಗೆ ಪೂರಕವಾಗಿದ್ದು ಅದಕ್ಕೆ ಫ್ರಾಂಚೈಸಿ ಪಾಲುದಾರರ ಸದೃಢ ಜಾಲ ಮತ್ತು ಸದೃಢ ಉದ್ಯಮಶೀಲತೆಯ ಬೇಡಿಕೆಯ ಬೆಂಬಲ ಪಡೆದಿದೆ. ಬಿಲೈವ್ ಭಾರತದ ಅತ್ಯಂತ ವಿಶ್ವಾಸಾರ್ಹ ಒಇಎಂಗಳೊಂದಿಗೆ ಸಹಯೋಗ ಹೊಂದಿದ್ದು ಅದರಲ್ಲಿ ಆಂಪಿಯರ್, ಓಲಾ, ಟಿವಿಎಸ್, ಬಿಗಾಸ್, ಲೆಕ್ಟ್ರಿಕ್ಸ್ ಮತ್ತಿತರೆ ಮುಂಚೂಣಿಯ ಬ್ರಾಂಡ್ ಗಳಿಗೆ ವಿಶ್ವಾಸಾರ್ಹ, ಉನ್ನತ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿ2ಬಿ ಕಾರ್ಯಾಚರಣೆಗಳಿಗೆ ನೀಡುತ್ತದೆ.

ಈ ಸಹಯೋಗವು ವಾಹನದ ಸ್ಥಿರ ಲಭ್ಯತೆ, ಉನ್ನತೀಕರಿಸಿದ ಕಾರ್ಯಕ್ಷಮತೆ ಮತ್ತು ಬಿಲೈವ್ ನ ವಿಸ್ತರಿಸುತ್ತಿರುವ ಫ್ಲೀಟ್ ಇಕೊಸಿಸ್ಟಂ ತಡೆರಹಿತ ಅಳವಡಿಕೆಯನ್ನು ನೀಡುತ್ತದೆ.
ಬಿಲೈವ್ ಇಝಿ ಫ್ರಾಂಚೈಸಿ ಮಾದರಿಯು ಇವಿ ಉದ್ಯಮಶೀಲತೆಗೆ ಭಾರತದ ಅತ್ಯಂತ ಆಕರ್ಷಕ ಅವಕಾಶಗಳಲ್ಲಿ ಒಂದನ್ನು ರೂಪಿಸುತ್ತದೆ. ಫ್ರಾಂಚೈಸಿ ಪಾಲುದಾರರು 25-30 ಇವಿಳಲ್ಲಿ ಹೂಡಿಕೆ ಮಾಡುತ್ತಾರೆ, ಬಿಲೈವ್ ತಂಡವು ಸಮಗ್ರ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ.

ಅದರಲ್ಲಿ ನಿಯೋಜನೆ, ನಿರ್ವಹಣೆ, ರೈಡರ್ ಅಸೈನ್ಮೆಂಟ್ ಮತ್ತು ಆನ್-ಗ್ರೌಂಡ್ ಅನುಷ್ಠಾನ ಒಳಗೊಂಡಿರುತ್ತದೆ. ಇದು ಫೊಕೊ(ಫ್ರಾಂಚೈಸಿ-ಓನ್ಡ್, ಕಂಪನಿ-ಆಪರೇಟೆಡ್) ವಿಧಾನವು ಪ್ರತಿ ವಾಹನಕ್ಕೆ 5,000 ರೂ. 5,500 ರೂ. ಮಾಸಿಕ ಆದಾಯ ನೀಡುವ ಮೂಲಕ ಪಾಲುದಾರರಿಗೆ ನಾಲ್ಕು ವರ್ಷಗಳಲ್ಲಿ 200% ಗಳಿಕೆ ತಂದುಕೊಡುತ್ತದೆ.

ಪಾಲುದಾರರು ಅವರ ಇಡೀ ವಾಹನಗಳನ್ನು ಬಿಲೈವ್ ಸ್ಮಾರ್ಟ್ ಫ್ಲೀಟ್ ಡ್ಯಾಶ್ ಬೋರ್ಡ್ ಮೂಲಕ ನಿರ್ವಹಿಸಬಹುದು, ಇದು ವಾಹನದ ಆರೋಗ್ಯ, ನಿಯೋಜನೆಗಳು, ಗಳಿಕೆ ಮತ್ತು ಕಾರ್ಯಾಚರಣೆಯ ದಕ್ಷತೆಗಳ ಕುರಿತು ಒಳನೋಟಗಳನ್ನು ನೀಡುತ್ತದೆ.

ಇದರಿಂದ ವಾಹನಗಳ ನಿರ್ವಹಣೆಯನ್ನು ಎಲ್ಲಿಂದಲೂ ಪಾರದರ್ಶಕ, ಊಹಿಸಬಲ್ಲ ಮತ್ತು ಲಭ್ಯವಾಗಿಸುತ್ತದೆ.
ಕಳೆದ ತ್ರೈಮಾಸಿಕದಲ್ಲಿ ಸದೃ ವೇಗ ಕಂಡುಕೊಂಡ ಬಿಲೈವ್ ಇಝಿ ಬೆಂಗಳೂರು, ಗೋವಾ, ಚೆನ್ನೈ, ಕೊಲ್ಕತಾ ಮತ್ತು ಪುಣೆಗಳಲ್ಲಿ ಸದೃಢ ಬೇಡಿಕೆಯನ್ನು ಹೊಂದಿದೆ.

ಇಂದು ಬಿಲೈವ್ ಇಝಿ 50 ಕ್ಕೊ ಹೆಚ್ಚಿನ, ಫ್ರಾಂಚೈಸಿ ಪಾಲುದಾರರ ಜಾಲ ಹೊಂದಿದೆ ಮತ್ತು 3000 ಕ್ಕೊ ಹೆಚ್ಚು ಇವಿಗಳನ್ನು ಹೊಂದಿದ್ದು ಭಾರತದ ಅತ್ಯಂತ ಮುಂಚೂಣಿಯ ಇವಿ ರೆಂಟಲ್ ಮತ್ತು ಫ್ಲೀಟ್ ಮ್ಯಾನೇಜ್ಮೆಂಟ್ ಪ್ಲಾಟ್ ಫಾರಂಗಳಲ್ಲಿ ಒಂದಾಗಿಸಿದೆ.

ಬಿಲೈವ್ ಸಿಇಒ ಮತ್ತು ಸಹ-ಸಂಸ್ಥಾಪಕ ಸಂದೀಪ್ ಮುಖರ್ಜೀ, “ಬಿಲೈವ್ ಇಝಿ ಫ್ರಾಂಚೈಸಿ ಮಾದರಿಯು ಭಾರತದ ಇವಿ ಯಶೋಗಾಥೆಯ ಭಾಗವಾಗಲು ಬಯಸುವ ಹೊಸ ತಲೆಮಾರಿನ ಉದ್ಯಮಿಗಳಿಗೆ ಯಶಸ್ವಿ ಮತ್ತು ಲಾಭದಾಯಕ ಅವಕಾಶ ಎಂದು ಸಾಬೀತಾಗಿದೆ” ಎಂದು ಬಿಲೈವ್ ಸಿಇಒ ಮತ್ತು ಸಹ-ಸಂಸ್ಥಾಪಕ ಸಂದೀಪ್ ಮುಖರ್ಜೀ ಹೇಳಿದರು.

“ನಮ್ಮ ಆದ್ಯತೆಯು ವಿಶ್ವಾಸಾರ್ಹ ಒಇಎಂ ಪಾಲುದಾರರ ಬೆಂಬಲ, ಸದೃಢ ಫ್ರಾಂಚೈಸಿ ಜಾಲಗಳು ಮತ್ತು ಸ್ಮಾರ್ಟ್ ಫ್ಲೀಟ್ ತಂತ್ರಜ್ಞಾನದಿಂದ ಸನ್ನದ್ಧವಾದ ವಿಸ್ತರಿಸಬಲ್ಲ ಇವಿ ಇಕೊಸಿಸ್ಟಂ ನಿರ್ಮಿಸುವುದಾಗಿದೆ” ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version