Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ

ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ

0

ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಗರದ ಕದ್ರಿಯಲ್ಲಿ ಹೊಟ್ಟೆಯಲ್ಲಿ ಮಲ ತುಂಬಿಕೊಂಡು ಅಸ್ವಸ್ಥಗೊಂಡಿದ್ದ ಹೆಬ್ಬಾವನ್ನು ಉರಗ ರಕ್ಷಕ ಧೀರಜ್ ಗಾಣಿಗ ಅವರು ಪತ್ತೆ ಹಚ್ಚಿದ್ದಾರೆ. ಬಳಿಕ ವೈದ್ಯರ ಬಳಿಗೆ ತಂದಿದ್ದಾರೆ.
೧೩ ಕೆಜಿ ತೂಕದ ಹೆಬ್ಬಾವಿಗೆ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮಲ ತುಂಬಿದ್ದು ಪತ್ತೆಯಾಗಿತ್ತು. ಹೀಗಾಗಿ ಮೂರು ಗಂಟೆಗಳ ಕಾಲ ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿಯವರ ತಂಡ ಹೆಬ್ಬಾವಿಗೆ ಚಿಕಿತ್ಸೆ ಮಾಡಿದ್ದಾರೆ. ಬಳಿಕ ಹೆಬ್ಬಾವು ಸ್ವಸ್ಥಗೊಂಡಿದ್ದು, ಹೆಬ್ಬಾವನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ.

Exit mobile version