Home ಅಪರಾಧ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋದ ಇಬ್ಬರು ಪೊಲೀಸರು

ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋದ ಇಬ್ಬರು ಪೊಲೀಸರು

0
ಮಳೆ

ಗದಗ: ಜಿಲ್ಲೆಯಾದ್ಯಂತ ಸೋಮವಾರ ಮಧ್ಯರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಇಬ್ಬರು ಪೊಲೀಸರು ನೀರಿನಲ್ಲಿ ತೇಲಿ ಹೋಗಿದ್ದಾರೆ.
ಗಜೇಂದ್ರಗಡದಲ್ಲಿನ ಬಂದೋಬಸ್ತ್ ಮುಗಿಸಿ ವಾಪಸ್ಸು ಬರುವಾಗ ತೊಂಡಿಹಾಳ ಬಂಡಿಹಾಳ ಹಳ್ಳದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇಬ್ಬರು ಬೈಕ್ ಸಹಿತ ನೀರಿನಲ್ಲಿ ತೇಲಿ ಹೋಗಿದ್ದರು. ನೀರಿನಲ್ಲಿ ಕೊಚ್ಚಿ ಹೋಗಿರುವ ಪೊಲೀಸ್ ಪೇದೆಗಳಲ್ಲಿ ಓರ್ವನ ಶವ ಪತ್ತೆಯಾಗಿದೆ. ಇನ್ನೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ಶವವಾಗಿ ಪತ್ತೆಯಾಗಿರುವ ಪೇದೆಯನ್ನು ನಿಂಗಪ್ಪ ಹಲವಾಗಲಿ (೨೯) ಎಂದು ಗುರುತಿಸಲಾಗಿದೆ. ಈ ಪೇದೆಯ ಶವ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ಪತ್ತೆಯಾಗಿದೆ.

Exit mobile version