Home ತಾಜಾ ಸುದ್ದಿ ಹಗರಿ ಹಳ್ಳದಲ್ಲಿ ಕೊಚ್ಚಿ ಹೋದ ಆಕಳು

ಹಗರಿ ಹಳ್ಳದಲ್ಲಿ ಕೊಚ್ಚಿ ಹೋದ ಆಕಳು

0

ಕೊಟ್ಟೂರು: ಅಲಬೂರು ಹಗರಿ ಹಳ್ಳವು ಕಳೆದ ಎರಡು ದಿನಗಳಿಂದ ತನ್ನ ಹರಿವು ಕಡಿಮೆ ಮಾಡಿಕೊಂಡು ಹರಿಯುತ್ತಿದ್ದು, ಇಂದು ಬೆಳಗಿನಿಂದ ಪುನಃ ಸೇತುವೆ ಮೇಲೆ ಹರಿಯಲು ಪ್ರಾರಂಭಿಸಿದೆ. ಗ್ರಾಮದ ಬಾರಿಕರ ಫಕಿರಪ್ಪ ಸೇತುವೆಯ ಎಡಭಾಗದ ದಂಡೆಯಲ್ಲಿ ಆಕಳ ಮೈ ತೊಳೆಯಲು ಹೋದಾಗ ಆಕಸ್ಮಿಕವಾಗಿ ಆಕಳು ನೀರಿನ ಸೆಳವಿಗೆ ಕೊಚ್ಚಿಕೊಂಡು ಹೋಗಿದೆ.
ನೀರಿನ ಸೆಳವಿಗೆ ಸಿಕ್ಕ ಆಕಳು ಸೇತುವೆ ಕೆಳಭಾಗದಿಂದ ಈ ಕಡೆಗೆ ತೇಲಿ ಬಂದ ಪರಿಣಾಮ ನೀರು ಕುಡಿದಿದ್ದರಿಂದ ಈಜಲು ಸಾಧ್ಯವಾಗದೆ ಕೊಚ್ಚಿಕೊಂಡು ಹೋಗಿ ನೀರಿನ ಮಧ್ಯದಲ್ಲಿನ ಜಾಲಿ ಗಿಡಗಳಿಗೆ ಸಿಕ್ಕು ನಿಂತಿದ್ದು, ಗ್ರಾಮಸ್ಥರ ಸಹಕಾರದಿಂದ ಮೃತಪಟ್ಟ ಆಕಳನ್ನು ದಡಕ್ಕೆ ತರಲಾಯಿತು.

ಆಕಳು

Exit mobile version