Home ತಾಜಾ ಸುದ್ದಿ ಸಿ.ಟಿ.ರವಿ ಕೇಸ್: ಲೋಕಾಪುರಕ್ಕೂ ಕರೆತಂದು ಮತ್ತೊಬ್ಬ ಎಂಎಲ್ಸಿಯನ್ನು ರಸ್ತೆಯಲ್ಲೇ ಇಳಿಸಿದ ಪೊಲೀಸರು

ಸಿ.ಟಿ.ರವಿ ಕೇಸ್: ಲೋಕಾಪುರಕ್ಕೂ ಕರೆತಂದು ಮತ್ತೊಬ್ಬ ಎಂಎಲ್ಸಿಯನ್ನು ರಸ್ತೆಯಲ್ಲೇ ಇಳಿಸಿದ ಪೊಲೀಸರು

0

ಬಾಗಲಕೋಟೆ: ಬಿಜೆಪಿ ನಾಯಕ, ವಿಪ ಸದಸ್ಯ ಸಿ.ಟಿ.ರವಿ.ಅವರನ್ನು ಬೆಳಗಾವಿಯಲ್ಲಿ ಬಂಧಿಸಿದ್ದ ಪೊಲೀಸರು ರಾತ್ರಿ ಬಾಗಲಕೋಟೆ ಜಿಲ್ಲೆ ಲೋಕಾಪುರಕ್ಕೂ ಕರೆ ತಂದಿರುವುದು ಬೆಳಕಿಗೆ ಬಂದಿದೆ.

ಸಿ.ಟಿ.ರವಿ ಅವರನ್ನು ಬೆಂಗಳೂರಿಗೆ ಕರೆದೊಯ್ಯುವುದಾಗಿ ಹೇಳಿದ್ದ ಪೊಲೀಸರು ದಿಢೀರ್ ಬಾಗಲಕೋಟೆ ಜಿಲ್ಲೆಯನ್ನು‌ ಪ್ರವೇಶಿಸಿದಲ್ಲದೇ ಸಿ.ಟಿ.ರವಿ ಅವರಿಗೆ ಜತೆಯಾಗಿದ್ದ ಎಂಎಲ್ಸಿ ಕೇಶವ ಪ್ರಸಾದ್ ಅವರನ್ನು ಲೋಕಾಪುರ ಯರಗಟ್ಟಿ ಮಾರ್ಗ ಮಧ್ಯೆ ಅಜ್ಞಾತ ಸ್ಥಳದಲ್ಲಿ‌ ಇಳಿಸಿ ಮುಂದೆ ತೆರಳಿದ್ದಾರೆ.

ಬೆಂಗಳೂರಿಗೆ‌ ನೇರವಾಗಿ ತೆರಳಬೇಕಿದ್ದ ಪೊಲೀಸರು ಲೋಕಾಪುರ ಕಡೆ ಆಗಮಿಸುವುದನ್ನು ಅರಿತ ಬಿಜೆಪಿ ಕಾರ್ಯಕರ್ತರು ಮಧ್ಯರಾತ್ರಿಯೇ ಠಾಣೆ ಮುಂದೆ ಆವರಿಸಿದ್ದಾರೆ. ಕಾರ್ಯಕರ್ತರ ದಂಡು ಕಂಡ ಪೊಲೀಸರು ವಾಹನ‌ ನಿಲ್ಲಿಸದೆ ನೇರವಾಗಿ ತೆರಳಿದ್ದಾರೆ.

ರಾತ್ರಿ ಘಟನೆಯನ್ನು ಮಾಧ್ಯಮಗಳಿಗೆ ವಿವರಿಸಿರುವ ಎಂಎಲ್ಸಿ ಕೇಶವಪ್ರಸಾದ್ ಅವರು ಹಿರೇಬಾಗೇವಾಡಿಯಿಂದಲೂ ನಾನು ಸಿ.ಟಿ.ರವಿ ಅವರೊಂದಿಗೆ ಇದ್ದೆ ಆದರೆ ಬೆಂಗಳೂರಿಗೆ ಕರೆದೊಯ್ಯುವುದಾಗಿ ಹೇಳಿದ ಪೊಲೀಸರು ಬಾಗಲಕೋಟೆ, ವಿಜಯಪುರ ಜಿಲ್ಲೆಯನ್ನೂ ಸುತ್ತಾಡಿಸಿದ್ದಾರೆ.ದೊಡ್ಡ ಪೊಲೀಸ್ ಪಡೆಯನ್ನೇ ತಂದಿದ್ದರು, ರವಿ ಅವರು ಭಯೋತ್ಪಾದಕ, ಕೊಲೆಗಡುಕರಲ್ಲ ಅತ್ಯಂತ ಹೀನಾಯವಾಗಿ ಅವರನ್ನು ನಡೆಸಿಕೊಳ್ಳುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version