Home ನಮ್ಮ ಜಿಲ್ಲೆ ಕೋಲಾರ ಸಿದ್ದು ಕೋಲಾರದಿಂದ ಎಷ್ಟೇ ಬಾರಿ ಸ್ಪರ್ಧಿಸಲಿ ಸೋಲು ಖಚಿತ: ಮುನಿಸ್ವಾಮಿ

ಸಿದ್ದು ಕೋಲಾರದಿಂದ ಎಷ್ಟೇ ಬಾರಿ ಸ್ಪರ್ಧಿಸಲಿ ಸೋಲು ಖಚಿತ: ಮುನಿಸ್ವಾಮಿ

0
muniswami

ಸಿದ್ದರಾಮಯ್ಯ ಕೋಲಾರದಿಂದ ಹತ್ತು ಬಾರಿ ಸ್ಪರ್ಧಿಸಿದರೂ ಸೋಲಿಸಿ ಮನೆಗೆ ಕಳುಹಿಸುತ್ತೇವೆ ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಸಿದ್ದು ಕೋಲಾರ ಪ್ರವಾಸದ ಕುರಿತು ವ್ಯಂಗ್ಯವಾಡಿದ ಅವರು, ಮಾಜಿ ಮುಖ್ಯಮಂತ್ರಿಯಾದವರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಇದು ನಿಜಕ್ಕೂ ಶೋಷಣಿ. ಚಾಂಮುಂಡಿ ಕ್ಷೇತ್ರದಲ್ಲಿ ಸೋಲು, ಬಾದಾಮಿ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರು. ಕ್ಷೇತ್ರದ ಕೆಲ ನಾಯಕರು ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರುಹಿಸಿಕೊಳ್ಳುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೊತ್ತೂರು ಮಂಜುನಾಥಗೆ ಕೋಲಾರ ಕ್ಷೇತ್ರದ ಟಿಕೆಟ್‌ ನೀಡುತ್ತೇವೆ ಎಂದು ಹೇಳಿ ಈಗ ಸಿದ್ದರಾಮಯ್ಯ ಅವರನ್ನು ಕ್ಷೇತ್ರ ಕರೆತರುವ ಕೆಲಸ ಮಾಡಲಾಗುತ್ತಿದ್ದೆ. ಇದರಿಂದ ಕೊತ್ತೂರು ಮಂಜುನಾಥಗೆ ಮೋಸ ಮಾಡಿದ್ದಾರೆ. ಸ್ಥಳೀಯ ನಾಯಕರು ಅವರವರ ಬೇಳೆ ಬೇಯಿಸಿಕೊಳ್ಳಲು ಸಿದ್ದು ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಜಾತಿ ಲೆಕ್ಕಚಾರದಲ್ಲಿ ಕುರುಬರೆಲ್ಲಾ ಸಿದ್ದರಾಮಯ್ಯಗೆ ಓಟ್ ಹಾಕೋದಾದ್ರೆ, ಕಳೆದ ಬಾರಿ ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರದಲ್ಲಿ ಯಾಕೆ ಸೋಲು ಅನುಭವಿಸಿದರು?. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಒಳ್ಳೆ‌ ಕೆಲಸ ಮಾಡುತ್ತಿದೆ. ಹಾಗಾಗಿ ರಾಜ್ಯದಲ್ಲಿ ೧೫೦+ ಟಾರ್ಗೆಟ್ ಇಟ್ಟಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

Exit mobile version