Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಸಿದ್ದರಾಮಯ್ಯ ವಿರುದ್ದ ಹೆಗಡೆ ವಾಗ್ದಾಳಿ

ಸಿದ್ದರಾಮಯ್ಯ ವಿರುದ್ದ ಹೆಗಡೆ ವಾಗ್ದಾಳಿ

0

ಮಂಗಳೂರು: ಆಡಂಬರದ ಬದುಕು ಒಪ್ಪದಿರುವುದು ಮತ್ತು ಸತ್ಯದ ಬದುಕು ಹಿಂದುತ್ವ. ಈ ಹಿಂದುತ್ವದ ಬಗ್ಗೆ ಇಂತಹ ಕಮಂಗಿಗಳಿಗೆ ಏನ್ರೀ ಅರ್ಥ ಆಗಬೇಕು ಎಂದು ಸಂಸದ, ಬಿಜೆಪಿ ನಾಯಕ ಅನಂತ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುತ್ವದ ಕುರಿತು ನೀಡಿದ ಹೇಳಿಕೆಗೆ ವಿರುದ್ದ ಅನಂತ ಕುಮಾರ್ ಹೆಗಡೆ ಅವರ ಹೆಸರು ಹೇಳದೆ ಟೀಕಿಸಿದರು.
ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಎಂದು ಹೇಳಿಸಿಕೊಳ್ಳಲು ಕೆಲವು ಯೋಗ್ಯತೆಗಳಿವೆ. ನಮ್ಮ ದೇಶದಲ್ಲಿ ಕೆಲವರು ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ. ನಾನು ಹಿಂದೂ, ಆದರೆ ನನಗೆ ಹಿಂದುತ್ವ ಬೇಕಿಲ್ಲ ಎನ್ನುತ್ತಾರೆ, ಈ ಮನುಷ್ಯನಿಗೆ ಅವನ ರಕ್ತಾನೇ ಗೊತ್ತಿಲ್ಲ, ಜಾತಿಯ ಗೂಡು ಬಿಟ್ಟು ಹೊರಗೆ ಬರಲು ಸಾಧ್ಯವಿಲ್ಲದವರೆಲ್ಲ, ಪುಸ್ತಕ ಓದಲು ಯೋಗ್ಯತೆ ಇಲ್ಲದವರೆಲ್ಲ, ದೇವಸ್ಥಾನಕ್ಕೆ ಹೋಗುವಾಗ ಹೇಗೆ ಹೋಗಬೇಕು ಎಂದು ತಿಳಿಯದವರೆಲ್ಲ ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ. ಕುತ್ತಿಗೆಗೆ ಹಾಕುವ ಶಾಲಿನಲ್ಲಿ ಹಿಂದುತ್ವ ಕಾಣಬಾರದು. ಹಣೆಗೆ ಇಟ್ಟಿರೋ ತಿಲಕದಲ್ಲಿ ಹಿಂದುತ್ವ ಕಾಣಬಾರದು, ನಮ್ಮ ಬದುಕಿನಲ್ಲಿ ಕಾಣಬೇಕು. ನನ್ನ ನಾಲಗೆ, ನನ್ನ ಬದುಕು, ನನ್ನ ವಿಚಾರದಲ್ಲಿ ಕಾಣುವುದು ನಿಜವಾದ ಹಿಂದುತ್ವ. ಒಳಗಡೆ ಒಂದು, ಹೊರಗಡೆ ಒಂದು ಇರುವುದನ್ನು ಹಿಂದುತ್ವ ಎನ್ನಲು ಸಾಧ್ಯವಿಲ್ಲ. ಸುಳ್ಳು ಹೇಳುವುದು, ಅಸತ್ಯದ ಮಾತು ಹಿಂದುತ್ವ ಅಲ್ಲ ಎಂದಿದ್ದಾರೆ.

Exit mobile version