Home ನಮ್ಮ ಜಿಲ್ಲೆ ಧಾರವಾಡ ಅವಳಿ ನಗರಕ್ಕೆ ವಿಧಿವಿಜ್ಞಾನ ಶಾಖೆ

ಅವಳಿ ನಗರಕ್ಕೆ ವಿಧಿವಿಜ್ಞಾನ ಶಾಖೆ

0

ಹುಬ್ಬಳ್ಳಿ: ನ್ಯಾಷನಲ್ ಫಾರೆನ್ಸಿಕ್ ಸೈನ್ಸ್(ವಿಧಿವಿಜ್ಞಾನ) ಯೂನಿವರ್ಸಿಟ ಆಫ್ ಕ್ಯಾಂಪಸ್(ಶಾಖೆ)ನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರಕಾರ ಪತ್ರದ ಮೂಲಕ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಯೋಜನೆಯ ಡಿಪಿಆರ್ ಪ್ರಸ್ತುತಪಡಿಸಿದ ನಂತರ ಮುಂದಿನ ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಅವರು, ಹುಬ್ಬಳ್ಳಿ-ಧಾರವಾಡ ಜನತೆಗೆ ಮತ್ತೊಂದು ಖುಷಿಯ ವಿಚಾರವಾಗಿದ್ದು, ಮತ್ತೊಂದು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯನ್ನು ಅವಳಿನಗರಕ್ಕೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Exit mobile version