Home ನಮ್ಮ ಜಿಲ್ಲೆ ಧಾರವಾಡ ಸಿದ್ದರಾಮಯ್ಯ ಭಿಕ್ಷೆ ಬೇಡಿ ಕಾಲು ಬಿದ್ದು ಸಿಎಂ ಆದವರು: ಕಟೀಲ್‌

ಸಿದ್ದರಾಮಯ್ಯ ಭಿಕ್ಷೆ ಬೇಡಿ ಕಾಲು ಬಿದ್ದು ಸಿಎಂ ಆದವರು: ಕಟೀಲ್‌

0
Kateel

ಸಿದ್ದರಾಮಯ್ಯ ನೀವು ಯಾರ ಯಾರ ಬಳಿ ಭಿಕ್ಷೆ ಬೇಡಿ, ಕಾಲು ಬಿದ್ದು ಸಿಎಂ ಆದವರು ಎಂದು ನಿಮಗೆ ಗೊತ್ತಿರಬೇಕು ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯರ‍್ಯಾರ ಬಳಿ ಭಿಕ್ಷೆ ಬೇಡಿ, ಕಾಲು ಬಿದ್ದು ಮುಖ್ಯಮಂತ್ರಿ ಆದವರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ದೇವೇಗೌಡರ ಕಾಲಿಗೆ ಅಡ್ಡ ಬಿದ್ದು, ನಮಸ್ಕಾರ ಮಾಡಿ ರಾಜಕಾರಣದಲ್ಲಿ ಬೆಳೆದವರು. ಅವರ ಕಾಲಡಿಯಲ್ಲಿ ಕುಳಿತು ನಂತರ ಅವರನ್ನೇ ಕಾಲಲ್ಲೇ ತುಳಿದರು. ಇಂದಿರಾ ಗಾಂಧಿಗೆ ಕೆಟ್ಟ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಕಾಲಿಗೆ ಬಿದ್ದು ಮುಖ್ಯಮಂತ್ರಿ ಆಗಿದ್ದರು ಎಂದರು.

Exit mobile version