Home ನಮ್ಮ ಜಿಲ್ಲೆ ಮೋದಿ ಯಾವ ಗುರು ಎಂಬುವುದನ್ನು ಪಾಕ್‌ಗೆ ಕೇಳಿ

ಮೋದಿ ಯಾವ ಗುರು ಎಂಬುವುದನ್ನು ಪಾಕ್‌ಗೆ ಕೇಳಿ

0
eshwarappa

ವಿಜಯಪುರ: ಪಾಕಿಸ್ತಾನಕ್ಕೆ ಕೇಳಿ ಮೋದಿ ಯಾವ ಗುರು ಎಂದು ಹೇಳುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮೋದಿ ವಿಶ್ವಗುರು ಅಲ್ಲ, ಪುಕ್ಕಲು ಗುರು ಎನ್ನುವ ಸಿದ್ಧರಾಮಯ್ಯ ಅವರ ಟ್ವೀಟ್‌ಗೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ, ಸರ್ಜಿಕಲ್ ಸ್ಟ್ರೈಕ್ ಆಯ್ತು, ಅದು ಗೊತ್ತಿತ್ತಾ ಅವರಿಗೆ? ಅದು ಆದ ಮೇಲೆ ಒಂದು ಹೆಜ್ಜೆ ಆದರೂ ಅವರು ಮುಂದೆ ಬಂದಿದ್ದಾರಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಪುಕ್ಕಲು ಯಾರು ಅನ್ನೋದು ಇಡೀ ವಿಶ್ವ ನೋಡುತ್ತೆ ಎಂದರು.
ಮೋದಿ ಪ್ರಧಾನಿ ಆಗುವ ಮುಂಚೆ ಇಡೀ ವಿಶ್ವ ಪಾಕಿಸ್ತಾನದ ಜೊತೆ ಇತ್ತು. ಭಾರತ ಒಬ್ಬಂಟಿಯಾಗಿತ್ತು. ಇಂದು ಎಲ್ಲರೊಂದಿಗೆ ಸ್ನೇಹ ಬೆಳೆಸಿ ಶಸ್ತ್ರಾಸ್ತ್ರ ಜಾಸ್ತಿ ಮಾಡಿಕೊಂಡು ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಅದಕ್ಕೆ ಮೀಸಲು ಇಟ್ಟಿದ್ದಾರೆ. ಇಂದು ಇಡೀ ವಿಶ್ವ ಭಾರತದೊಂದಿಗೆ ಇದೆ, ಪಾಕಿಸ್ತಾನ ಒಬ್ಬಂಟಿಯಾಗಿದೆ. ಪಾಕಿಸ್ತಾನವೇ ಮೋದಿಗೆ ಹೆದರಬೇಕಾದರೇ ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದು ಈಶ್ವರಪ್ಪ ಪ್ರಶ್ನಿಸಿದರು.

Exit mobile version