Home ಕ್ರೀಡೆ ಸರ್ಕಾರದ ಮೂರು ಆಫರ್‌ಗಳಲ್ಲಿ ನಗದು ಆಯ್ಕೆ ಮಾಡಿದ ಪೋಗಟ್

ಸರ್ಕಾರದ ಮೂರು ಆಫರ್‌ಗಳಲ್ಲಿ ನಗದು ಆಯ್ಕೆ ಮಾಡಿದ ಪೋಗಟ್

0

ಚಂಡಿಗಢ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೆಚ್ಚು ತೂಕದ ಕಾರಣದಿಂದಾಗಿ ಪದಕ ವಂಚಿತರಾಗಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಹರಿಯಾಣ ಸರ್ಕಾರದ ಸರ್ಕಾರದಿಂದ ನಗದು ಪುರಸ್ಕಾರ ಪಡೆದಿದ್ದಾರೆ.
ಒಲಿಂಪಿಕ್ಸ್‌ನಲ್ಲಿ 50 ಕೆಜಿ ತೂಕದ ಮಹಿಳೆಯರ ವಿಭಾಗದಲ್ಲಿ ಅಂತಿಮ ಸುತ್ತಿಗೂ ಮೊದಲು ದೇಹತೂಕದಲ್ಲಿ ಕೊಂಚ ಹೆಚ್ಚಾದ ಕಾರಣದಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಒಂದು ವೇಳೆ ಆ ಅಂತಿಮ ಸುತ್ತಿನಲ್ಲಿ ವಿನೇಶ್ ಅರ್ಹತೆ ಪಡೆದು ಸೋತಿದ್ದರೂ ಭಾರತಕ್ಕೆ ಬೆಳ್ಳಿ ಪದಕ ಬರುತ್ತಿತ್ತು. ಹೀಗಾಗಿ ಒಲಿಂಪಿಕ್ಸ್ ಪದಕ ವಂಚಿತರಾದ ಫೋಗಟ್ ಅವರಿಗೆ ಬೆಳ್ಳಿ ಪದಕದ ಸರಿಸಮಾನವಾಗಿ ಉಡುಗೊರೆ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಿಸಿತ್ತು. ಈ ಪೈಕಿ ಅವರಿಗೆ ಮೂರರಲ್ಲಿ ಒಂದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಿಲಾಗಿತ್ತು. ಇದರಲ್ಲಿ ಅತ್ಯುತ್ತಮ ಕ್ರೀಡಾಪಟುಗೆ ನೀಡುವ ‘ಎ’ ಶ್ರೇಣಿಯ ನೌಕರಿ ಹಾಗೂ ಹರಿಯಾಣ ವಿಕಾಸ ಪ್ರಾಧಿಕಾರದ ನಿವೇಶನ ಅಥವಾ 4 ಕೋಟಿ ರೂ ನಗದು ಇದರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸರ್ಕಾರ ಹೇಳಿತ್ತು. ಇದೀಗ ವಿನೇಶ್ ಫೋಗಟ್ 4 ಕೋಟಿ ರೂ. ನಗದು ಪುರಸ್ಕಾರ ಆಯ್ಕೆ ಮಾಡಿಕೊಂಡಿದ್ದಾರೆ.
ನಗದು ಬಹುಮಾನಕ್ಕೆ ಸಂಬಂಧಿಸಿದಂತೆ ವಿನೇಶ್ ಫೋಗಟ್ ಅವರ ಒಪ್ಪಿಗೆ ಪತ್ರವನ್ನು ಕ್ರೀಡಾ ಇಲಾಖೆ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.

Exit mobile version