Home ತಾಜಾ ಸುದ್ದಿ ವಕ್ಫ್ ಕಾಯಿದೆ ವಿರುದ್ಧ ಮುಸ್ಲಿಮರ ಪ್ರತಿಭಟನೆ

ವಕ್ಫ್ ಕಾಯಿದೆ ವಿರುದ್ಧ ಮುಸ್ಲಿಮರ ಪ್ರತಿಭಟನೆ

0

ಇಳಕಲ್ : ಇಲ್ಲಿನ ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ ಮುಸ್ಲಿಂ ಬಾಂಧವರು ಶುಕ್ರವಾರದಂದು ಮಧ್ಯಾಹ್ನ ವಕ್ಫ್ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸಿದರು
ಕೇಂದ್ರ ಸರಕಾರ ತಂದ ಈ ನೂತನ ಕಾಯಿದೆಯಿಂದಾಗಿ ಲಕ್ಷಾಂತರ ಮುಸ್ಲಿಂ ಬಾಂಧವರಿಗೆ ಅನ್ಯಾಯವಾಗುತ್ತಿದೆ ಕೇಂದ್ರ ಸರಕಾರ ಕೂಡಲೇ ಈ ಕಾಯಿದೆಯನ್ನು ಹಿಂದೆಗೆದುಕೊಳ್ಳಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್ ಹೇಳಿದರು, ಮಹಮ್ಮದ್ ಯುಸುಫ್ ಬಾಗವಾನ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಇದರಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿಯಲ್ಲಿ ನಗರದ ಬೇರೆಬೇರೆ ಮಸೀದೆಗಳಿಂದ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮಸೀದೆಗಳ ಮುಂದೆ ನಿಂತು ಪ್ರತಿಭಟನೆ ಮಾಡಿ ವಕ್ಫ್ ಕಾಯಿದೆ ಹಿಂದೆಗೆದುಕೊಳ್ಳಲು ಒತ್ತಾಯಿಸಿದರು

Exit mobile version