Home ಅಪರಾಧ ಸಣ್ಣ ಅಪಘಾತ, ಬೈಕ್‌ ಸವಾರನಿಂದ ರೌಡಿಸಂ: ಸ್ಥಳೀಯರಿಂದ ಧರ್ಮದೇಟು

ಸಣ್ಣ ಅಪಘಾತ, ಬೈಕ್‌ ಸವಾರನಿಂದ ರೌಡಿಸಂ: ಸ್ಥಳೀಯರಿಂದ ಧರ್ಮದೇಟು

0

ಮಂಗಳೂರು: ನಗರದ ಕದ್ರಿ ಶಿವಭಾಗ್‌ ಪ್ರದೇಶದಲ್ಲಿ ಕಾರು-ಬೈಕ್‌ ನಡುವೆ ನಡೆದ ಸಣ್ಣ ಅಪಘಾತದ ಸಂದರ್ಭ ಬೈಕ್‌ ಸವಾರ ಯುವಕ ಲೋಹದ ‘ಪಂಚ್‌’ನಿಂದ ವ್ಯಕ್ತಿಯ ಮುಖಕ್ಕೆ ಗುದ್ದಿ ಗಾಯಗೊಳಿಸಿದ್ದಲ್ಲದೆ, ಕಣ್ಣಿಗೆ ಪೆಪ್ಪರ್‌ ಸ್ಪ್ರೇ ಎರಚಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಯುವಕನ ರೌಡಿಸಂನಿಂದ ರೊಚ್ಚಿಗೆದ್ದ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಕದ್ರಿ ಶಿವಭಾಗ್‌ನ ಪೆಟ್ರೋಲ್‌ ಬಂಕ್‌ ಬಳಿ ಓಮ್ನಿ ಕಾರು ಮತ್ತು ಬೈಕ್‌ ನಡುವೆ ಸಣ್ಣ ಮಟ್ಟಿನ ಅಪಘಾತ ನಡೆದಿತ್ತು. ಈ ವೇಳೆ ರೊಚ್ಚಿಗೆದ್ದ ಬೈಕ್‌ ಸವಾರ ತನ್ನ ಬಳಿ ಇದ್ದ ಲೋಹದ ಪಂಚ್‌ನಿಂದ ಓಮ್ನಿ ಕಾರು ಚಾಲಕನ ಮುಖಕ್ಕೆ ಗುದ್ದಿ, ಕಣ್ಣಿಗೆ ಪೆಪ್ಪರ್‌ ಸ್ಪ್ರೇ ಮಾಡಿ ಕ್ರೌರ್ಯ ಎಸಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣ ಸ್ಥಳೀಯರು ಆತನನ್ನು ಹಿಡಿದು 112 ಪೊಲೀಸ್‌ ವಾಹನಕ್ಕೆ ಕರೆ ಮಾಡಿದ್ದರು. ಕೆಲ ನಿಮಿಷಗಳಲ್ಲಿ ಆಗಮಿಸಿದ ಪೊಲೀಸರು ಕ್ರೌರ್ಯ ಮೆರೆದ ಯುವಕನನ್ನು ಕರೆದೊಯ್ದರು.
ಕುಕೃತ್ಯ ಎಸಗಲು ಸಂಚು?:
ಬೈಕ್‌ ಸವಾರ ಯುವಕ ತನ್ನ ಬಳಿ ಮಾರಕ ಆಯುಧ ಮಾತ್ರವಲ್ಲದೆ ಪೆಪ್ಪರ್‌ ಸ್ಪ್ರೇ ಹಿಡಿದುಕೊಂಡು ತಿರುಗಾಡುತ್ತಿದ್ದುದು ಸ್ಥಳೀಯರ ತೀವ್ರ ಸಂಶಯಕ್ಕೆ ಕಾರಣವಾಗಿದೆ. ಆತ ಯಾವುದೋ ಕುಕೃತ್ಯ ಎಸಗುವ ಉದ್ದೇಶ ಹೊಂದಿದ್ದಾಗಿಯೂ ಆರೋಪಿಸಿದ್ದಾರೆ.

Exit mobile version