Home ತಾಜಾ ಸುದ್ದಿ ಸಂಗನಕಲ್ಲು ಗ್ರಾಮದಿಂದ ಮೋಕ ಕಡೆ ಸಾಗಿದ ಭಾರತ್ ಜೋಡೋ ಯಾತ್ರೆ

ಸಂಗನಕಲ್ಲು ಗ್ರಾಮದಿಂದ ಮೋಕ ಕಡೆ ಸಾಗಿದ ಭಾರತ್ ಜೋಡೋ ಯಾತ್ರೆ

0

ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಇಂದು ಬೆಳಗ್ಗೆ 6.30ಕ್ಕೆ ಸಂಗನಕಲ್ಲು ಗ್ರಾಮ ಹೊರ ವಲಯದ ಕೆಬಿಆರ್ ಬಡಾವಣೆಯ ಕ್ಯಾಂಪ್‌ನಿಂದ ಅರ್ಧ ಕಿಮೀ ಕಾರಿನಲ್ಲಿ ಬಂದ ರಾಹುಲ್ ಗಾಂಧಿ ಬೈಪಾಸ್ ರಸ್ತೆಯ ಕಾಳಿದಾಸ ವೃತ್ತದಿಂದ ಕಾಲ್ನಡಿಗೆ ಆರಂಭಿಸಿದರು.
ಬಳ್ಳಾರಿ ಗ್ರಾಮೀಣ ಶಾಸಕರಾದ ನಾಗೇಂದ್ರ, ಹರಿಹರ ಶಾಸಕ ವೈ. ರಾಮಪ್ಪ, ಜಿಪಂ ಸದಸ್ಯ ಅಲ್ಲಂ ಪ್ರಶಾಂತ್ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದರು. ರಾಹುಲ್ ಯಾತ್ರೆ ಬರುವಾಗ ರಸ್ತೆ ಬದುಗಳಲ್ಲಿ ನಿಂತ ಜನರು ರಾಹುಲ್ ಗಾಂಧಿ ಕಡೆ ಕೈ ಬೀಸಿ ಹರ್ಷ ವ್ಯಕ್ತಪಡಿಸಿದರು. ಕೆಲವರು ಫೋಟೋ ತೆಗೆಯಿಸಿಕೊಳ್ಳಲು ಯತ್ನಿಸಿದರು. ಆದರೆ ಸಾಧ್ಯ ಆಗಲಿಲ್ಲ.

Exit mobile version