Home ಅಪರಾಧ ಶೇ.50ರಷ್ಟು ರಿಯಾಯಿತಿ: 5 ಕೋಟಿ ದಂಡ ಸಂಗ್ರಹ

ಶೇ.50ರಷ್ಟು ರಿಯಾಯಿತಿ: 5 ಕೋಟಿ ದಂಡ ಸಂಗ್ರಹ

0

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಯ ಫೈನ್ 50 ಪರ್ಸೆಂಟ್​ ಡಿಸ್ಕೌಂಟ್​ ವಿಚಾರ ಗೊತ್ತಾಗ್ತಿದ್ದೇ ತಡ ಜನರು ತಂಡೋಪ ತಂಡವಾಗಿ ಬಂದು ಸಂಚಾರಿ ನಿಯಮ ಉಲ್ಲಂಘನೆಯ ಫೈನ್ ಕಟ್ಟಿದ್ದಾರೆ. ಇದರೊಂದಿಗೆ ಇಂದು ಒಂದೇ ದಿನ ಬರೋಬ್ಬರಿ 2.1 ಲಕ್ಷ ಕೇಸ್​​ಗಳಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ. ಒಂದೇ ದಿನ ಸಾವಿರಾರು ಮಂದಿ ದಂಡ ಪಾವತಿ ಮಾಡಲು ಮುಂದಾದ ಕಾರಣ ಸಾರಿಗೆ ಇಲಾಖೆಯ ಸರ್ವರ್​​ ಕೂಡ ಡೌನ್​ ಆಗಿ ಸಮಸ್ಯೆ ಎದುರಾಗಿತ್ತು.ಇನ್ನು ಸವಾರರಿಗೆ ಕರ್ನಾಟಕ ಒನ್ ವೆಬ್ ಸೈಟ್, ಪೇಟಿಎಂ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿದ್ದು, ಫೆಬ್ರವರಿ 11 ರವರೆಗೆ ಈ ಡಿಸ್ಕೌಂಟ್​ ನಿಯಮ ಜಾರಿಯಲ್ಲಿರಲಿದೆ.

Exit mobile version