Home ನಮ್ಮ ಜಿಲ್ಲೆ ಚಿಕ್ಕಮಗಳೂರು ಶೃಂಗೇರಿ ಶಾರದಾಂಬೆ ಆಶೀರ್ವಾದ ಪಡೆದ ಮೋಹನ್ ಭಾಗವತ್

ಶೃಂಗೇರಿ ಶಾರದಾಂಬೆ ಆಶೀರ್ವಾದ ಪಡೆದ ಮೋಹನ್ ಭಾಗವತ್

0

ಚಿಕ್ಕಮಗಳೂರು: ಶೃಂಗೇರಿಗೆ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿದ್ದು, ಶೃಂಗೇರಿ ಶಾರದಾಂಬೆಯ ಆಶೀರ್ವಾದ ಪಡೆದರು.
ಬಳಿಕ ಒಂದೂವರೆ ಗಂಟೆಗಳ ಕಾಲ ಹಿರಿಯ ಗುರು ಭಾರತೀತೀರ್ಥ ಶ್ರೀಗಳು ಹಾಗೂ ಕಿರಿಯ ಗುರು ವಿಧುಶೇಖರ ಶ್ರೀಗಳ ಜೊತೆ ಚರ್ಚೆ ನಡೆಸಿದರು. ಭಾಗವತ್ ಅವರೊಂದಿಗೆ ರಾಜ್ಯ ಮಟ್ಟದ ಐವರು ಆರ್‌ಎಸ್ಎಸ್ ಸದಸ್ಯರು ಭಾಗಿಯಾಗಿದ್ದು, ಗುರುವತ್ರಯರ ಜೊತೆ ಚರ್ಚಿಸಿ, ಆಶೀರ್ವಾದ ಪಡೆದು ವಾಪಸ್‌ ತೆರಳಿದರು.
ಭಾಗವತ್ ಬಂದಿರುವ ಕಾರಣ ನಿಖರವಾಗಿ ತಿಳಿದು ಬಂದಿಲ್ಲವಾದರೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲು ಬಂದಿರಬಹುದು ಎಂದು ಹೇಳಲಾಗುತ್ತಿದೆ.

Exit mobile version