Home ತಾಜಾ ಸುದ್ದಿ ಶಿಕ್ಷಣ ವ್ಯಾಪಾರೀಕರಣ ಕಾಲಘಟ್ಟದಲ್ಲಿ ಕೆಎಲ್ಇ ನಿಸ್ವಾರ್ಥ ಸಾಧನೆ ಅನನ್ಯ; ಅಮಿತ್ ಶಾ

ಶಿಕ್ಷಣ ವ್ಯಾಪಾರೀಕರಣ ಕಾಲಘಟ್ಟದಲ್ಲಿ ಕೆಎಲ್ಇ ನಿಸ್ವಾರ್ಥ ಸಾಧನೆ ಅನನ್ಯ; ಅಮಿತ್ ಶಾ

0

ಹುಬ್ಬಳ್ಳಿ: ಶಿಕ್ಷಣ ವ್ಯಾಪಾರೀಕರಣದ ಈ ಕಾಲಘಟ್ಟದಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯ ನಿಸ್ವಾರ್ಥ ಸಾಧನೆ ಅನನ್ಯವಾದುಧು. ದೇಶದ ಉನ್ನತಿಗೆ ಸಂಸ್ಥೆಯ ಕೊಡುಗೆ ಶ್ಲಾಘನೀಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಕೆಎಲ್ಇ ಸಂಸ್ಥೆಯ ಬಿ.ವಿ
ಬಿ ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೂರದೃಷ್ಟಿಯಿಂದ ಕೆಎಲ್ಇ ಸಂಸ್ಥೆಯನ್ನು ಹಿರಿಯ ಕಟ್ಟಿದ್ದಾರೆ. ಅದನ್ನು ಸಮರ್ಥವಾಗಿ ಡಾ.ಪ್ರಭಾಕರ ಕೋರೆ ಮುನ್ನಡೆಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಸಂಸ್ಥೆಯ ಹೆಜ್ಜೆಗುರುತುಗಳು ಹೆಮ್ಮೆಯ ಸಂಗತಿಯಾಗಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಒಲಂಪಿಕ್ ನಲ್ಲೂ ಸಾಧನೆ ಮಾಡಬೇಕು ಎಂಬ ಅಶಯ ಕೋರೆಯವರದು. ಆ ಸಾಧನೆ ಕನಸು ನನಸು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

  • ಭಾರತ ಐದು ಟ್ರಿಲಿಯನ್ ಡಾಲರ್ ಗುರಿ

ಭಾರತ ಐದು ಟ್ರಿಲಿಯನ್ ಡಾಲರ್ ಗುರಿ ಸಾಧನೆ ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಆ ಗುರಿ ಸಾಧನೆಗೆ ಎಲ್ಲರೂ ಕೈ ಜೋಡಿಸಬೇಕು. ಐದು ಟ್ರಿಲಿಯನ್ ಡಾಲರ್ ಗುರಿ ಸಾಧನೆಯಾದರೆ ನಮ್ಮ ದೇಶದ ಚಿತ್ರಣವೇ ಬದಲಾಗಲಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸುಧಾರಣೆಗಳಾಗಲಿವೆ. ಉತ್ಕೃಷ್ಡ ಮಟ್ಟದ ಶಿಕ್ಷಣ ಎಲ್ಲರಿಗೂ ಲಭಿಸಲಿದೆ. ಜಾಗತಿಕ ಮಟ್ಟದಲ್ಲಿ 3 ನೇ ಅರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಲಿದೆ ಎಂದರು.

Exit mobile version