Home ನಮ್ಮ ಜಿಲ್ಲೆ ದಾವಣಗೆರೆ ಶಾಲೆಗಳಲ್ಲಿ ಸಾವರ್ಕರ್ ಫೋಟೊ ಹಾಕಲು ಆದೇಶಿಸಿಲ್ಲ: ಬಿ.ಸಿ. ನಾಗೇಶ್

ಶಾಲೆಗಳಲ್ಲಿ ಸಾವರ್ಕರ್ ಫೋಟೊ ಹಾಕಲು ಆದೇಶಿಸಿಲ್ಲ: ಬಿ.ಸಿ. ನಾಗೇಶ್

0

ದಾವಣಗೆರೆ: ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅವರ ಭಾವಚಿತ್ರವನ್ನ ಶಾಲೆಗಳಲ್ಲಿ ಹಾಕಿದರೆ ಅದರಲ್ಲಿ ತಪ್ಪೇನು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆಗಳು ಸಾವರ್ಕರ್ ಫೋಟೊ ಹಾಕುವಂತೆ ಸರ್ಕಾರದಿಂದ ಯಾವುದೇ ಆದೇಶ ನೀಡಿಲ್ಲ. ಸಾವರ್ಕರ್ ಭಾವಚಿತ್ರ ಹಾಕುವುದು ಶಿಕ್ಷಕರಿಗೆ ಬಿಟ್ಟ ವಿಚಾರ. ಫೋಟೊ ಹಾಕಿದರೆ ನಾವೇನು ತಪ್ಪು ಅನ್ನಲ್ಲ ಎಂದರು.
ಅನೇಕ ಹಿಂದೂಗಳ ಹತ್ಯೆ ಮಾಡಿರುವ ಟಿಪ್ಪು ನಮ್ಮ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರನಲ್ಲ. ಅವನು ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು ಹೋರಾಟ ಮಾಡಿದ, ಕೊಡವರ ಮೇಲೆ ದಾಳಿನಡೆಸಿ, ಅವರನ್ನು ಹತ್ಯೆ ಮಾಡಿದರುವ ಟಿಪ್ಪು ಖಡ್ಗದ ಮೇಲೆ ಏನೆಂದು ಬರೆದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನವರು ನಾವು ಟಿಪ್ಪು ಪೋಟೋ ಹಾಕಿಕೊಳ್ತೀವಿ ಅಂತ ಹೇಳಲಿ ಬೇಕಿದ್ದರೆ ಎಂದು ಕುಟುಕಿದರು‌.

Exit mobile version