Home ನಮ್ಮ ಜಿಲ್ಲೆ ವಿ. ಶ್ರೀನಿವಾಸ ಪ್ರಸಾದ ʻಅಲೆಮಾರಿಗಳ ರಾಜʼ – ಎ.ಎಚ್‌. ವಿಶ್ವನಾಥ

ವಿ. ಶ್ರೀನಿವಾಸ ಪ್ರಸಾದ ʻಅಲೆಮಾರಿಗಳ ರಾಜʼ – ಎ.ಎಚ್‌. ವಿಶ್ವನಾಥ

0

ಮೈಸೂರು: ನನ್ನನ್ನು ಅಲೆಮಾರಿ ಎಂದು ಟೀಕಿಸುವ ಸಂಸದ ವಿ. ಶ್ರೀನಿವಾಸ ಪ್ರಸಾದ ʻಅಲೆಮಾರಿಗಳ ರಾಜʼ ಎಂದು ವಿಧಾನ ಪರಿಷತ್‌ ಸದಸ್ಯ ಎ.ಎಚ್‌. ವಿಶ್ವನಾಥ ಟೀಕಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಿಬ್ಬರದ್ದೂ 50 ವರ್ಷಗಳ ಸ್ನೇಹ. ವಿ. ಶ್ರೀನಿವಾಸ ಪ್ರಸಾದ ಮೊದಲು ಆರೆಸ್ಸೆಸ್‌ ಕಾರ್ಯಕರ್ತರಾಗಿದ್ದರು. ನಂತರ ನಿಜಲಿಂಗಪ್ಪ ಅವರ ಸಂಸ್ಥಾ ಕಾಂಗ್ರೆಸ್‌ ಸೇರಿದರು. ಜನತಾ ಪಾರ್ಟಿ, ಕಾಂಗ್ರೆಸ್‌, ಸಮತಾ ಪಾರ್ಟಿ, ಜೆಡಿಯು, ಜೆಡಿಎಸ್‌ಗೆ ಹೋಗಿ ಬಂದಿದ್ದಾರೆ. ಮತ್ತೆ ಕಾಂಗ್ರೆಸ್‌ ಸೇರಿದರು. ಈಗ ಬಿಜೆಪಿಯಲ್ಲಿರುವ ಶ್ರೀನಿವಾಸ ಪ್ರಸಾದ ನನ್ನನ್ನು ಅಲೆಮಾರಿ ಎನ್ನುತ್ತಿದ್ದಾರೆ ಎಂದು ವಿಶ್ವನಾಥ ಕುಟುಕಿದರು.
ಸ್ವಾರ್ಥಕ್ಕಾಗಿ ಸ್ನೇಹ ಮರೆತು ಮಾತನಾಡುವುದು ತರವಲ್ಲ. ಸ್ನೇಹಿತನ ಮಾತುಗಳಿಂದ ಮನಸ್ಸಿಗೆ ಬಹಳ ನೋವಾಗಿದೆ. ಸ್ನೇಹಕ್ಕೆ ಬಲಿಯಾದವರ ಬಗ್ಗೆ ಮಾತನಾಡುವಾಗ ಯೋಚಿಸಬೇಕು ಎಂದು ಭಾವುಕರಾದರು.

ವಿ  ಶ್ರೀನಿವಾಸ ಪ್ರಸಾದ ʻಅಲೆಮಾರಿಗಳ ರಾಜʼ   ಎ ಎಚ್‌  ವಿಶ್ವನಾಥ

Exit mobile version