Home ತಾಜಾ ಸುದ್ದಿ ವಿಷಕನ್ಯೆಯೇ ಎಂದಿದ್ದೇನೆ ಯತ್ನಾಳ ಸಮರ್ಥನೆ

ವಿಷಕನ್ಯೆಯೇ ಎಂದಿದ್ದೇನೆ ಯತ್ನಾಳ ಸಮರ್ಥನೆ

0

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಹುಚ್ಚ, ಸೋನಿಯಾಗಾಂಧಿ ಅವರಿಗೆ ವಿಷಕನ್ಯೆ ಎಂದು ಕರೆಯುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಲವಾರು ಬಾರಿ ಅವಮಾನ ಮಾಡಿದ್ದರಿಂದ ವಿಷಕನ್ಯೆಯೇ ಎಂದು ಪ್ರಶ್ನಿಸಿದ್ದೇನೆ. ಅದನ್ನು ತಮಗೆ ಬಂದಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಸೋನಿಯಾಗಾಂಧಿ ವಿಷ ಕನ್ಯೆ ಹೇಳಿಕೆಗೆ ಯತ್ನಾಳ ಸಮರ್ಥನೆ ಮಾಡಿಕೊಂಡರು.
ರಾಹುಲ್ ಗಾಂಧಿ ಅವರು, ಆಲೂಗಡ್ಡೆಯಿಂದ ಚಿನ್ನ ತೆಗೆಯತ್ತಿನಿ ಅಂತಾರೆ, ಚೀನಾ ರಾಯಭಾರಿ ಜೊತೆಗೆ ಸಭೆ ಮಾಡುತ್ತಾರೆ. ದೇಶ ವಿರೋಧಿಗಳ ಜೊತೆಗೆ ಕೈಜೋಡಿಸತ್ತಾರೆ ಹಾಗಿದ್ರೆ ಇವರನ್ನು ಬುದ್ಧಿವಂತ ಕರೆಯಬೇಕಾ..? ಹೀಗಿದ್ದಾಗ ರಾಹುಲ್ ಗಾಂಧಿಯವರನ್ನು ದೊಡ್ಡ ಬುದ್ದಿವಂತ ಕರೆಯಬೇಕಾ..? ಹುಚ್ಚ ಅಲ್ಲಾ ಅರೇ ಹುಚ್ಚ ಅಂತ ಕರೆಯಬೇಕು..! ವಿದೇಶದಿಂದ ಬಂದ ಸೋನಿಯಾ ವಿಷ ಕನ್ಯೆಯಾ ಅಂತ ಪ್ರಶ್ನಿಸಿದ್ದೆ. ಆದರೆ ಮೀಡಿಯಾಗಳು ಪ್ರಶ್ನಾರ್ಥಕ ಚಿಹ್ನೆಯನ್ನೇ ತೆಗೆದುಬಿಟ್ಟಿವೆ. ಕಾಂಗ್ರೆಸ್‌ನವರು ಮೋದಿ ವಿರುದ್ಧ 99 ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ನಾನು ಸೋನಿಯಾಗಾಂಧಿ ಬಗ್ಗೆ ಪ್ರಶ್ನಿಸಿದ್ದೇನೆ ಎಂದರು.

Exit mobile version