Home ಅಪರಾಧ ವಿದ್ಯುತ್‌ ತಂತಿ ತಾಗಿ 13ರ ಬಾಲಕಿ ಸಾವು

ವಿದ್ಯುತ್‌ ತಂತಿ ತಾಗಿ 13ರ ಬಾಲಕಿ ಸಾವು

0

ಬೆಳಗಾವಿ : ಮಚ್ಛೆ ಗ್ರಾಮದ ಮಧುರಾ ಮೋರೆ ಎಂಬ ಬಾಲಕಿ ಕರೆಂಟ್‌ ಶಾಕ್‌ ಕೊಡೆದು ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮನೆ ಮುಂದಿನ ವಿದ್ಯುತ್‌ ತಂತಿಯನ್ನು ಮುಟ್ಟಿದ 13 ವರ್ಷದ ಬಾಲಕಿ ಸ್ಥಳದಲ್ಲೇ ಕರೆಂಟ್‌ ಶಾಕ್‌ ಕೊಡೆದು ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ.
ಮಚ್ಛೆ ಗ್ರಾಮದ ಮಧುರಾ ಮೋರೆ (13) ಸ್ಥಳದಲ್ಲೇ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದ್ದು. ಮನೆಯ ಒಂದನೇ ಮಹಡಿ ಮೇಲೆ ಆಟ ಆಡುತ್ತ ನಿಂತಾಗ ಮನೆಯ ಮುಂದೆಯೇ ನೇತಾಡುತ್ತಿದ್ದ ಹೈಟೆನ್ಷನ್ ವಿದ್ಯುತ್‌ ತಂತಿ ತಾಗಿದೆ. ಇನ್ನು ವಿದ್ಯುತ್‌ ತಂತಿ ತಾಗಿದ ಕ್ಷಣವೇ ಬಾಲಕಿ ಕರೆಂಟ್‌ ಶಾಕ್‌ ಹೊಡೆದು ಮೈಯೆಲ್ಲಾ ಸುಟ್ಟ ಗಾಯಗಳಂತಾಗಿ ಸಾವನ್ನಪ್ಪಿದ್ದಾಳೆ. ಇನ್ನು ಈ ಘಟನೆ ನಡೆದ ವೇಳೆ ಮನೆಯ ಮುಂದೆ ಯಾರೂ ಇರಲಿಲ್ಲ. ಘಟನೆ ನಡೆದ ನಂತರ ಮಗುವನ್ನು ನೋಡಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ, ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.

Exit mobile version