Home ಸುದ್ದಿ ದೇಶ ಚಾಲಕರ ಮನಸ್ಸಿನ ಮಾತು ಅರಿಯಲು: ರಾಹುಲ್ ಗಾಂಧಿ ಚಂಡೀಗಢಕ್ಕೆ ಟ್ರಕ್ ಸವಾರಿ

ಚಾಲಕರ ಮನಸ್ಸಿನ ಮಾತು ಅರಿಯಲು: ರಾಹುಲ್ ಗಾಂಧಿ ಚಂಡೀಗಢಕ್ಕೆ ಟ್ರಕ್ ಸವಾರಿ

0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ರಾತ್ರಿ ಟ್ರಕ್ ಚಾಲಕರನ್ನು ಭೇಟಿ ಮಾಡಿ “ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಲು” ಮತ್ತು ಅವರ “ಮನಸ್ಸಿನ ಮಾತುಗಳನ್ನು” ಆಲಿಸಿದರು. ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಗಾಂಧಿ ಅವರು ಟ್ರಕ್‌ ಸವಾರಿ ಮಾಡಿದ ಚಿತ್ರಗಳು ವೈರಲ್‌ ಆಗಿವೆ. ಟ್ರಕ್ ಡ್ರೈವರ್‌ಗಳೊಂದಿಗೆ ಮಾತನಾಡುತ್ತ. ರಾಹುಲ್ ಗಾಂಧಿ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಚಾಲಕರೊಂದಿಗೆ ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದರು ಎಂದಿದ್ದಾರೆ. ಟ್ರಕ್ ಚಾಲಕರ ನಡುವೆ ಗಾಂಧಿ ಕುಳಿತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ ಕಾಂಗ್ರೆಸ್, “ನಿಮ್ಮ ಮಧ್ಯೆ ನಿಮ್ಮ ರಾಹುಲ್ ಗಾಂಧಿ” ಎಂದು ಟ್ವೀಟ್‌ ಮಾಡಿದೆ.

Exit mobile version