Home ಅಪರಾಧ ಲಾರಿ-ಕಾರ್ ಡಿಕ್ಕಿ: ಸ್ಥಳದಲ್ಲಿಯೇ ಮೂವರು ಸಾವು

ಲಾರಿ-ಕಾರ್ ಡಿಕ್ಕಿ: ಸ್ಥಳದಲ್ಲಿಯೇ ಮೂವರು ಸಾವು

0

ಸಿರವಾರ: ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲ್ಲೂಕಿ ಕಲ್ಲೂರು ಗ್ರಾಮದ ಸಮೀಪ ಸೋಮವಾರ ಮಧ್ಯಾಹ್ನ ನಡೆದಿದೆ.
ಮಾನ್ವಿ ಪಟ್ಟಣದ ನಿವಾಸಿಗಳಾದ ಅರ್ಫಜ್, ಯಾಸಿನ್ ಹಾಗೂ ಮಕ್ಬೂಲ್ ಎಂಬುವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಮಾನ್ವಿಯಿಂದ ರಾಯಚೂರಿಗೆ ಸಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ರಾಯಚೂರಿನಿಂದ ಮಾನ್ವಿ ಕಡೆಗೆ ತೆರಳುತ್ತಿದ್ದ ಲಾರಿ ಕಾರ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಿರವಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version