Home ನಮ್ಮ ಜಿಲ್ಲೆ ರೋಗಗ್ರಸ್ಥ ಮನಸ್ಥಿತಿಯ ಪರಾಕಾಷ್ಠೆ

ರೋಗಗ್ರಸ್ಥ ಮನಸ್ಥಿತಿಯ ಪರಾಕಾಷ್ಠೆ

0

ಬೆಂಗಳೂರು: ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಖಂಡಿಸಿ  ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದು “ಸನಾತನ ಧರ್ಮ ಮಲೇರಿಯ, ಡೆಂಗೆ ಇದ್ದಂತೆ..ಇದನ್ನು ನಿರ್ಮೂಲನೆ ಮಾಡಬೇಕು ಎಂದು
ಹೇಳಿಕೆ ಕೊಟ್ಟಿರುವ ತಮಿಳು ನಾಡಿನ ಕ್ರೀಡಾ ಸಚಿವರಾದ ಉದಯನಿಧಿ ಸ್ಟಾಲಿನ್ ಅವರ ತುಚ್ಚ, ಅನಾದರ, ಪ್ರಚೋದನಕಾರಿ ಹೇಳಿಕೆ ಖಂಡನೀಯ. ತಮಿಳು ನಾಡು ಸಂತರು,ಗುರುಗಳು, ಸಾಹಿತ್ಯ ಸಾಧಕರ ತವರೂರು. ರಮಣ ಮಹರ್ಷಿಗಳು, ಕಂಚಿ ಪೆರಿಯವ, ಅಲ್ವಾರ್, ನಯಾನ್ಮಾರ್ ಅವರು ಬದುಕಿ ಬಾಳಿ ಸಂಸ್ಕೃತಿಯನ್ನು, ಪರಂಪರೆಯನ್ನು, ಸನಾತನ ಧರ್ಮವನ್ನು ಶ್ರೀಮಂತಗೊಳಿಸಿದ ದೈವ ಭೂಮಿ.

ಇಂತಹ ಪವಿತ್ರ ನೆಲದಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ಹೇಳುವುದು ಡಿ.ಎಂ.ಕೆ ಪಕ್ಷದ ರೋಗಗ್ರಸ್ಥ ಮನಸ್ಥಿತಿಯ ಪರಾಕಾಷ್ಠೆ ಎಂದಿದ್ದಾರೆ.

Exit mobile version