Home ನಮ್ಮ ಜಿಲ್ಲೆ ಕೋಲಾರ ರಾತ್ರೋ ರಾತ್ರಿ ರಸ್ತೆ ಮಧ್ಯೆ ನಿರ್ಮಿಸಿದ್ದ ಗುಂಬಜ್ ತೆರವು

ರಾತ್ರೋ ರಾತ್ರಿ ರಸ್ತೆ ಮಧ್ಯೆ ನಿರ್ಮಿಸಿದ್ದ ಗುಂಬಜ್ ತೆರವು

0

ಕೋಲಾರ : ರಾತ್ರೋ ರಾತ್ರಿ ರಸ್ತೆ ಮಧ್ಯೆ ನಿರ್ಮಿಸಿದ್ದ ಗುಂಬಜ್ ತೆರವು ಮಾಡಿದ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದದ ನ್ಯೂಟೌನ್ ಮಸೀದಿ ಬಳಿ ಈ ಘಟನೆ ಸಂಭವಿಸಿದ್ದು, ಇಂದು ಈದ್ ಮಿಲಾದ್ ಮೆರವಣಿಗೆ ಆಚರಿಸಲು ಅನಧಿಕೃತವಾಗಿ ಕೃತಕ ಗುಂಬಜ್ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಅನುಮತಿ ಪಡೆಯದೆ ಗುಂಬಜ್ ನಿರ್ಮಿಸಿ ಧ್ವಜಗಳನ್ನ ಕಟ್ಟಿದ್ದನ್ನು ಸಂಸದ ಮುನಿಸ್ವಾಮಿ ಹಾಗು ಕೆಲ ಬಿಜೆಪಿ ನಾಯಕರ ಆಕ್ಷೇಪಿಸಿದ ಹಿನ್ನಲೆಯಲ್ಲಿ ಪುರಸಭೆ ಅಧಿಕಾರಿಗಳಿಂದ ತೆರವು ಮಾಡಲಾಗಿದೆ.
ಗುಂಬಜ್ ತೆರವು ಗೊಳಿಸಿದ ಕ್ರಮಕ್ಕೆ ಕೆಲ ಮುಸ್ಲಿಂ ನಾಯಕರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಬಂಗಾರಪೇಟೆಯಲ್ಲಿ ಈದ್ ಮಿಲಾದ್ ಬೃಹತ್ ಮೆರವಣಿಗೆ ನಡೆಯಲಿದ್ದು ಸ್ಥಳಕ್ಕೆ ಕೆಜಿಎಪ್ ಡಿವೈಎಸ್ಪಿ ಭೇಟಿ ನೀಡಿದ್ದಾರೆ, ಸ್ತಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

https://twitter.com/samyuktakarnat2/status/1710189123556745444

Exit mobile version