Home ತಾಜಾ ಸುದ್ದಿ ಯತ್ನಾಳ ಹೊಸ ಪಕ್ಷ ಕಟ್ಟಿದರೆ ಹೋಗಲ್ಲ

ಯತ್ನಾಳ ಹೊಸ ಪಕ್ಷ ಕಟ್ಟಿದರೆ ಹೋಗಲ್ಲ

0

ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೊಸ ಪಕ್ಷ ಕಟ್ಟಿದರೆ ಅದಕ್ಕೂ ನಮಗೂ ಸಂಬಂಧ ಇಲ್ಲ. ಯತ್ನಾಳ ಅವರ ಹೊಸ ಪಕ್ಷಕ್ಕೆ ನಾವು ಹೋಗುವುದಿಲ್ಲ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯತ್ನಾಳ ಅವರನ್ನು ಕಳೆದ ಒಂದು ವಾರದಿಂದ ನಾವು ಭೇಟಿ ಮಾಡಿಲ್ಲ. ಅವರು ಈವರೆಗೂ ಹೊಸ ಪಕ್ಷ ಕಟ್ಟುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ನಮಗಿರುವ ಮಾಹಿತಿ ಪ್ರಕಾರ, ಯತ್ನಾಳ ಅವರು ಬರುವ ವಿಜಯದಶಮಿವರೆಗೂ ರಾಜ್ಯಾದ್ಯಂತ ಸಂಚರಿಸಿ ಜನರೊಂದಿಗೆ ಚರ್ಚಿಸಿ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಬಗ್ಗೆಯೂ ನಾವು ಪ್ರಯತ್ನ ನಡೆಸಿದ್ದೇವೆ. ಯತ್ನಾಳ ಅವರೊಂದಿಗೆ ಸ್ನೇಹ, ಸಂಬಂಧ ಯಾವತ್ತಿಗೂ ಚೆನ್ನಾಗಿಯೇ ಇರುತ್ತದೆ. ಆದರೆ ಬಿಜೆಪಿಯಿಂದ ನಾವು ಯಾರೂ ಬಿಟ್ಟು ಹೋಗುವ ಮಾತೇ ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಮಾಜಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಬಿ.ಪಿ.ಹರೀಶ್ ಹಾಜರಿದ್ದರು.

Exit mobile version