Home ತಾಜಾ ಸುದ್ದಿ ಮೈಲಾರಲಿಂಗನ ಭವಿಷ್ಯವಾಣಿ ಫುಲ್‌ ವೈರಲ್

ಮೈಲಾರಲಿಂಗನ ಭವಿಷ್ಯವಾಣಿ ಫುಲ್‌ ವೈರಲ್

0
ಕಾರ್ಣಿಕ

ಬೆಂಗಳೂರು: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನಿಜವಾಗಿದೆ ಎಂದು ಸಾಮಾಜಿಕ ಜಾಲತಾಣ ಸೇರಿದಂತೆ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಮೈಲಾರ ಗ್ರಾಮದಲ್ಲಿ ಕಾರ್ಣಿಕೋತ್ಸವ ಜರುಗಿತ್ತು. 14 ಅಡಿ ಎತ್ತರದ ಬಿಲ್ಲನ್ನೇರಿ ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್, ಎಂದು ಭವಿಷ್ಯವನ್ನು ಗೊರವಯ್ಯ ರಾಮಪ್ಪ ನುಡಿದಿದ್ದರು. ಇದೀಗ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು, ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಕ್ಕಿದ ಬೆನ್ನಲ್ಲೇ ಭವಿಷ್ಯವಾಣಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Exit mobile version