Home ತಾಜಾ ಸುದ್ದಿ ಮಹಿಳೆ ಆತ್ಮಹತ್ಯೆ:  ಕೊಲೆ ಆರೋಪ

ಮಹಿಳೆ ಆತ್ಮಹತ್ಯೆ:  ಕೊಲೆ ಆರೋಪ

0


ರಾಯಚೂರು: ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ವಾಸವಿನಗರದ ಬಡಾವಣೆಯಲ್ಲಿ ನಡೆದಿದೆ.
ನೇಣಿಗೆ ಶರಣಾದ ಮಹಿಳೆ ಪ್ರಸನ್ನಲಕ್ಷ್ಮೀ ಜಂಬನಗೌಡ (35) ಎಂದು ಗುರುತಿಸಲಾಗಿದೆ. ಆದರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮಕ್ಕಳು ಹಾಗೂ ತಂದೆ. ತಾಯಿ. ಸಂಬಂಧಿಕರು
ಗಂಡ. ಅತ್ತೆ, ಮಾವ, ಹಾಗೂ ಗಂಡನ ಸಹೋದರಿ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶನಿವಾರ ಬೆಳಿಗ್ಗೆಯಿಂದ ಗೃಹಣಿ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲು ಹೋದರೂ ಯಾವುದೇ ಕ್ರಮ ಕೈಗೊಂಡಿಲ್ಲ.ದೂರು ದಾಖಲಿಸದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ. ಭಾನುವಾರ ಬೆಳಿಗ್ಗೆ ಮಹಿಳಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ. ಮಹಿಳೆಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

Exit mobile version