Home ತಾಜಾ ಸುದ್ದಿ ಮಸೀದಿಯಲ್ಲಿ ಬಾಂಬ್ ಸ್ಫೋಟ

ಮಸೀದಿಯಲ್ಲಿ ಬಾಂಬ್ ಸ್ಫೋಟ

0

ಐವರು ಸಾವು, 20 ಜನರಿಗೆ ಗಾಯ

ಪಾಕಿಸ್ತಾನ: ಮದರಸಾವೊಂದರಲ್ಲಿ ಪ್ರಾರ್ಥನೆಯ ವೇಳೆ ಆತ್ಮಾಹುತಿ ಬಾಂಬ್​ ಸ್ಫೋಟಗೊಂಡು ಐದು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಖೈಬರ್​ ಪಖ್ತುಂಖ್ವಾ ಪ್ರಾಂತ್ಯದ ನೌಶೆರ್​ ಜಿಲ್ಲೆಯ ಮದರಸಾದಲ್ಲಿ ಈ ಘಟನೆ ನಡೆದಿದೆ, ಬಾಂಬ್ ಸ್ಫೋಟದಲ್ಲಿ ಮದರಸಾ ಮೇಲ್ವಿಚಾರಕರು ಹಾಗೂ ಜಮಿಯರ್​ ಉಲೇಮಾ ಇಸ್ಲಾಂ ಹಮಿದುಲ್​ ಹಕ್​ಹಕ್ಕಾನಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ, ಈ ಸ್ಫೋಟವು ಆತ್ಮಾಹುತಿ ಬಾಂಬ್ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಶವಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಶೇರಾ ಮತ್ತು ಪೇಶಾವರ ಎರಡೂ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

Exit mobile version